ಸಂಗಮನಾಥ ದರ್ಶನ ಪಡೆದ ಭಕ್ತರು

KSM NEWS 20-1
Published on

ಕೂಡಲಸಂಗಮ: ನಾಗರ ಅಮಾವಾಸ್ಯೆ ನಿಮಿತ್ತ ಭಕ್ತರು ಕರೊನಾ ಭೀತಿಯಲ್ಲೂ ಸೋಮವಾರ ಸಂಗಮನಾಥನ ದರ್ಶನ ಪಡೆದರು.

ಸರ್ಕಾರದ ನಿರ್ದೇಶನದಂತೆ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಪೂಜೆ, ಮಂಗಳಾರತಿ, ಅಭಿಷೇಕ, ಧಾರ್ಮಿಕ ಕಾರ್ಯಗಳಿಗೆ ಅವಕಾಶ ಕೊಡಲಿಲ್ಲ. ಮಂಡಳಿಯ ಆವರಣದಲ್ಲಿ ಜನರನ್ನು ನಿಯಂತ್ರಿಸಲು 25ಕ್ಕೂ ಅಧಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ದೇವಾಲಯ ಹೊರ ಭಾಗದ ಪ್ರವೇಶ ದ್ವಾರದಲ್ಲಿ ಭಕ್ತರು ಪರಸ್ಪರ ಅಂತರದಿಂದ ದೇವಾಲಯ ಪ್ರವೇಶಿಸಿದರೆ ಒಳ ಭಾಗದಲ್ಲಿ ಪರಸ್ಪರ ಅಂತರ ಮರೆತು ಗುಂಪು ಗುಂಪಾಗಿ ದರ್ಶನ ಪಡೆದರು.

ಪ್ರವಾಹ ಭೀತಿ ಹಿನ್ನೆಲೆ ನದಿಯಲ್ಲಿ ಸ್ನಾನ ಮಾಡಲು ಅವಕಾಶ ಇರುವುದಿಲ್ಲ. ಬೆಳಗ್ಗೆ 8 ರಿಂದ 12 ಮಧ್ಯಾಹ್ನ ಹಾಗೂ 3 ರಿಂದ ಸಂಜೆ 5 ರವರೆಗೆ ದೇವಾಲಯ ದರ್ಶನಕ್ಕೆ ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಕೂಡಲಸಂಗಮ ಅಭಿವೃದ್ಧಿ ಮಂಡಳಿ ಲೆಕ್ಕ ಅಧೀಕ್ಷಕ ಬಸವರಾಜ ಮಡಿವಾಳರ ಹೇಳಿದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net