

ಗೊಳಸಂಗಿ: ಪರಿಶಿಷ್ಟ ಜಾತಿಯ ಒಳ ಮೀಸಲಾತಿಯಿಂದಾಗಿ ಸಣ್ಣ ಸಣ್ಣ ಸಮುದಾಯದ ಜನತೆಗೆ ಅನ್ಯಾಯವಾಗಲಿದ್ದು, ಸರ್ಕಾರ ಕೂಡಲೇ ಅದನ್ನು ರದ್ದುಪಡಿಸಬೇಕೆಂದು ಸಮೀಪದ ಕೂಡಗಿಯ ಲಂಬಾಣಿ ತಾಂಡಾ ನಿವಾಸಿಗಳು ಶುಕ್ರವಾರ ಸಚಿವ ಶಿವಾನಂದ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ಕೊಲ್ಹಾರ ತಾಪಂ ಮಾಜಿ ಉಪಾಧ್ಯಕ್ಷ ಈಶ್ವರ ಜಾಧವ ಮಾತನಾಡಿ, ಒಳಮೀಸಲಾತಿಯಿಂದ ಬಂಜಾರ, ಭೋವಿ, ಭಜಂತ್ರಿ, ಕೊಂಚಿ ಕೊರವರು ಸೇರಿ ಮತ್ತಿತರ ಸಣ್ಣಪುಟ್ಟ ಸಮಾಜಗಳಿಗೆ ಅನ್ಯಾಯವಾಗಲಿದೆ. ನಮ್ಮ ಸಮಾಜದವರು ಹೊಟ್ಟೆ ಪಾಡಿಗಾಗಿ ಪರ ರಾಜ್ಯಗಳಿಗೆ ಗುಳೆ ಹೋಗಿ ಉಪಜೀವನ ನಡೆಸುತ್ತಿದ್ದಾರೆ. ಇಂಥ ಬಡಪಾಯಿ ಜನತೆಗೆ ಅನ್ಯಾಯವಾಗುವುದನ್ನು ನಾವು ಸಹಿಸುವುದಿಲ್ಲ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಜಿಪಂ ಮಾಜಿ ಉಪಾಧ್ಯಕ್ಷ ಚಂದ್ರಶೇಖರಗೌಡ ಪಾಟೀಲ, ಗ್ರಾಪಂ ಸದಸ್ಯ ಆರ್ೀ ತಾಳಿಕೋಟೆ, ಸುರೇಶ ನಾಯಕ, ರಾಜು ರಾಠೋಡ, ರಾಮು ಲಮಾಣಿ, ಪ್ರಕಾಶ ಲಮಾಣಿ, ರಾಜು ಜಾಧವ, ಬಾಬು ರಾಠೋಡ, ಡೋಂಗ್ರಿ ನಾಯಕ, ಅಪ್ಪು ಜಾಧವ, ಯಂಕು ರಾಠೋಡ, ಮಂಗಲು ಚವ್ಹಾಣ, ಎಲ್.ಪಿ.ನಾಯಕ, ಎಸ್.ಕೆ.ನಾಯಕ, ಸಾನಿಕ್ ರಾಠೋಡ ಇತರರಿದ್ದರು.