ಕೂಚಿಮನೆ ಕರ್ಕೇರ ಕುಟುಂಬದ ದೈವಗಳ ಪುನರ್ ಪ್ರತಿಷ್ಠೆ, ನೇಮೋತ್ಸವ ಸಂಪನ್ನ

IMG-20250505-WA0013
Published on

ಮಂಗಳೂರು: ಕೂಚಿಮನೆ ಉಳ್ಳಾಯ ದೇವರು ಜುಮಾದಿ ಬಂಟ ಹಾಗೂ ಪರಿವಾರ ದೈವಗಳ ಟ್ರಸ್ಟ್ ಕುಳಾಯಿ ಗ್ರಾಮ, ಮಂಗಳೂರು ವತಿಯಿಂದ ಕೂಚಿಮನೆ ಕರ್ಕೇರ ಕುಟುಂಬಸ್ಥರ ಕುಟುಂಬದ ದೈವಗಳ ಪುನರ್ ಪ್ರತಿಷ್ಠೆ ಹಾಗೂ ನೇಮೋತ್ಸವ ಭಾನುವಾರ ಸಂಪನ್ನಗೊಂಡಿತು.

ಟ್ರಸ್ಟ್ ಸ್ಥಾಪಕ ಅಧ್ಯಕ್ಷ ಡಿ.ಎಂ.ಕರ್ಕೇರ ಕುಳಾಯಿ, ಅಧ್ಯಕ್ಷ ಸತೀಶ್ ಕರ್ಕೇರ ಕೂಚಿಮನೆ ಕುಳಾಯಿ, ಕಾರ್ಯದರ್ಶಿ ಪ್ರವೀಣ್ ಕೆ.ಕರ್ಕೇರ ಕೋಡಿಕಲ್, ಕೋಶಾಧಿಕಾರಿ ಗಂಗಾಧರ ಕರ್ಕೇರ ಮೂಡುಬೆಟ್ಟು, ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಚಂದ್ರಹಾಸ ಕರ್ಕೇರ ಮೂಡುಬೆಟ್ಟು, ಅಧ್ಯಕ್ಷ ಮಾಧವ ಕರ್ಕೇರ ಕೋಡಿಕಲ್, ಕಾರ್ಯದರ್ಶಿ ವೆಂಕಟೇಶ್ ಕರ್ಕೇರ, ಕೋಶಾಧಿಕಾರಿ ಜತೀನ್ ಅಂಚನ್ ಉಪಸ್ಥಿತರಿದ್ದರು.

ಏ.27 ರಂದು ಶ್ರೀ ಕೃಷ್ಣ ಮಂದಿರ (ಗ್ರಾಮ ಸಂಘ) ದಿಂದ ಕೂಚಿಮನೆ ಮೂಲಸ್ಥಾನಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೂಲಕ ಆರಂಭಗೊಂಡ ಕಾರ್ಯಕ್ರಮ ಭಾನುವಾರ ಸಂಜೆ ಅಗೆಲು ಸೇವೆ ಮೂಲಕ ಮುಕ್ತಾಯಗೊಂಡಿತು. ಮೂಲಸ್ಥಾನದ ಧರ್ಮ ಚಾವಡಿಯ ಗೃಹಪ್ರವೇಶ, ಉಳ್ಳಾಯ ದೇವರು ಮತ್ತು ಮೈಸಂದಾಯ ದೈವದ ನೇಮೋತ್ಸವ, ಕೊಡಮಣಿತ್ತಾಯ ದೈವದ ನೇಮೋತ್ಸವ, ಸರಳ ಧೂಮಾವತಿ ಬಂಟ ದೈವ, ಅಣ್ಣಪ್ಪ ಪಂಜುರ್ಲಿ ದೈವ, ಕಾಂತೇರಿ ಧೂಮಾವತಿ ಬಂಟ ದೈವಗಳ ನೇಮೋತ್ಸವ ಈ ಅವಧಿಯಲ್ಲಿ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net