ಕೋಣಸಾಲೆ ಸುನಿಲ್‌ಕುಮಾರ್ ಮರು ಆಯ್ಕೆ

04M.D.R.1
ಮದ್ದೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕೋಣಸಾಲೆ ಸುನಿಲ್‌ಕುಮಾರ್ ಅವರನ್ನು ಪರಿಷತ್ ಪದಾಧಿಕಾರಿಗಳು ಅಭಿನಂದಿಸಿದರು. ಅಪೂರ್ವಚಂದ್ರ, ಎಂ.ಆರ್.ದಿನೇಶ್‌ಬಾಬು, ಕೆ.ಪಿ.ಶ್ರೀಧರ್, ಡಾ.ಡಿ.ಈರಯ್ಯ, ಎಚ್.ಕೆ.ಆನಂದ ಇದ್ದರು.
Published on

ಮದ್ದೂರು : ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಕೋಣಸಾಲೆ ಸುನಿಲ್‌ಕುಮಾರ್ ಮರು ಆಯ್ಕೆಯಾಗಿದ್ದು, ಇವರನ್ನು ಪರಿಷತ್‌ನ ಸದಸ್ಯರು ಅಭಿನಂದಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಸಂಘಟನೆ ವತಿಯಿಂದ ಶನಿವಾರ ಆಯೋಜಿಸಿದ್ದ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಸುನಿಲ್‌ಕುಮಾರ್, ನಾಡು, ನುಡಿ ನೆಲ, ಜಲ ಸಂಸ್ಕೃತಿಗೆ ಹೆಚ್ಚಿನ ಒತ್ತು ನೀಡುವ ಜತೆಗೆ ಇಂದಿನ ಯುವ ಪೀಳಿಗೆಗೆ ಸಾಹಿತ್ಯವನ್ನು ಪರಿಚಯಿಸುವ ಕೆಲಸಕ್ಕೆ ಮುಂದಾಗಬೇಕು. ಪ್ರೌಢಶಾಲೆ ಹಾಗೂ ಕಾಲೇಜು ಹಂತದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಕೊಡುಗೆ ನೀಡಿದ ಮಹನೀಯರ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಿ ಸಾಹಿತ್ಯ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕಾರ್ಯಯೋಜನೆ ರೂಪಿಸುವುದಾಗಿ ಹೇಳಿದರು.

ತಾಲೂಕು ಗೌರವಾಧ್ಯಕ್ಷ ಅಪೂರ್ವಚಂದ್ರ, ಉಪಾಧ್ಯಕ್ಷರಾದ ಎಂ.ಆರ್.ದಿನೇಶ್‌ಬಾಬು, ಕೆ.ಪಿ.ಶ್ರೀಧರ್, ಡಾ.ಡಿ.ಈರಯ್ಯ, ಪ್ರಧಾನ ಕಾರ್ಯದರ್ಶಿ ಎಚ್.ಕೆ.ಆನಂದ್, ಸಹ ಕಾರ್ಯದರ್ಶಿ ಎಂ.ರಮೇಶ್, ಸಂಘಟನಾ ಕಾರ್ಯದರ್ಶಿ ರಮೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net