

ನರಗುಂದ: ತಾಲೂಕಿನ ಕೊಣ್ಣೂರು ವಿರಕ್ತಮಠದ ಪೂಜ್ಯ ಡಾ. ಶಿವಾನಂದ ಮಹಾಸ್ವಾಮಿಗಳು ಲೋಕ ಕಲ್ಯಾಣಾರ್ಥ ಮೌನ ಲಿಂಗಾನುಷ್ಠಾನ ಕೈಗೊಂಡಿದ್ದಾರೆ. ಉತ್ತಮ ಮಳೆ- ಬೆಳೆಯಾಗಿ ರೈತರ ಸಂಕಷ್ಟ ದೂರವಾಗಬೇಕು. ದೇಶದಲ್ಲಿ ಶಾಂತಿ ನೆಲೆಸಿ, ಗಡಿ ಕಾಯುವ ಸೈನಿಕರಿಗೆ ಶಕ್ತಿ ತುಂಬುವಂತಾಗಬೇಕು. ನಿರುದ್ಯೋಗ ನಿವಾರಣೆ, ವ್ಯಾಪಾರ ಉದ್ಯಮಗಳ ಸುರಕ್ಷಿತ ಅಭಿವೃದ್ಧಿ ಸಂಕಲ್ಪಗಳೊಂದಿಗೆ ಮೇ 23ರಿಂದ ಜೂ.2ರವರೆಗೆ 11 ದಿನ ನಿರಂತರ ಮೌನಾನುಷ್ಠಾನ ಕೈಗೊಳ್ಳಲಿದ್ದಾರೆ. 23ರಿಂದ ಪ್ರತಿದಿನ ಬೆಳಗ್ಗೆ ಶ್ರೀಮಠದ ವಟುಗಳು, ಭಕ್ತರಿಂದ ವಿಶೇಷ ಪೂಜೆ- ಪುನಸ್ಕಾರ, ರುದ್ರಾಭಿಷೇಕ, ಬಿಲ್ವಾರ್ಚನೆ, ರಾತ್ರಿ ಶಿವನಾಮ ಭಜನೆ ನಡೆಸಲಾಗುವುದು ಎಂದು ದೇವಸ್ಥಾನದ ಸಮಿತಿ ತಿಳಿಸಿದೆ.