ಅಧ್ಯಕ್ಷರಾಗಿ ರೇಣುಕಾ ಉಪಾಧ್ಯಕ್ಷರಾಗಿ ಸಾಹೇಬಲಾಲ ಆಯ್ಕೆ

Konnoor, President, Vice President, Election,
ತಾಳಿಕೋಟೆ ತಾಲೂಕು ಕೊಣ್ಣೂರ ಗ್ರಾಪಂನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಯಾದ ರೇಣುಕಾ ಮಾದರ, ಸಾಹೇಬಲಾಲ ಟಕ್ಕಳಕಿ ಅವರು ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸಿದರು.
Published on

ತಾಳಿಕೋಟೆ: ತಾಲೂಕಿನ ಕೊಣ್ಣೂರ ಗ್ರಾಪಂ ಎರಡನೇ ಅವಧಿಯ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಚುನಾವಣೆ ಪ್ರಕ್ರಿಯೆ ಗುರುವಾರ ನಡೆಯಿತು. ಅಧ್ಯಕ್ಷರಾಗಿ ರೇಣುಕಾ ಮಾದರ, ಉಪಾಧ್ಯಕ್ಷರಾಗಿ ಸಾಹೇಬಲಾಲ ಟಕ್ಕಳಕಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎಸ್.ಡಿ. ಭಾವಿಕಟ್ಟಿ ಘೋಷಿಸಿದರು.

ಚುನಾವಣೆಯ ಪ್ರಕ್ರಿಯೆಯಲ್ಲಿ ಅಧಿಕಾರಿಗಳಾದ ಎಸ್.ಆರ್. ಕಟ್ಟಿಮನಿ, ಆರ್.ವೈ. ಸಾಗರ, ಆರ್.ಬಿ. ರುದ್ರವಾಡಿ, ಪಿಡಿಒ ಅನೀಲಕುಮಾರ ಕಿರಣಗಿ ಕಾರ್ಯನಿರ್ವಹಿಸಿದರು. ಒಟ್ಟು 16 ಸದಸ್ಯರ ಬಲದ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ 12 ಸದಸ್ಯರು ಪಾಲ್ಗೊಂಡಿದ್ದರು.

ವಿಜಯೋತ್ಸವ: ಅಸ್ಕಿ ಪೌಂಡೇಷನ್ ಅಧ್ಯಕ್ಷ, ಕಾಂಗ್ರೆಸ್ ಮುಖಂಡ ಸಿ.ಬಿ. ಅಸ್ಕಿ, ವೀರೇಶಗೌಡ ಅಸ್ಕಿ, ಶಂಕರಗೌಡ ಲಿಂಗದಳ್ಳಿ, ಶಿವನಗೌಡ ತಾಳಿಕೋಟಿ, ಅಶೋಕ ನಾಯ್ಕೋಡಿ, ಮಹ್ಮದ ವಾಲಿಕಾರ, ಯಲ್ಲಪ್ಪ ಮಾದರ, ದ್ಯಾಮಣ್ಣ ಸೋಮನಾಳ, ಮುತ್ತುಗೌಡ ಹಿಪ್ಪರಗಿ, ಸೋಮಣ್ಣ ಮಾದರ ನೇತೃತ್ವದಲ್ಲಿ ಆಯ್ಕೆಗೊಂಡ ನೂತನ ಅಧ್ಯಕ್ಷೆ ರೇಣುಕಾ ಮಾದರ ಮತ್ತು ಉಪಾಧ್ಯಕ್ಷ ಸಾಹೇಬಲಾಲ ಟಕ್ಕಳಕಿ ಅವರು ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸಿದರು. ಇದೇ ಸಮಯದಲ್ಲಿ ನೂತನ ಅಧ್ಯಕ್ಷ-ಉಪಾಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಅಸ್ಕಿ ಪೌಂಡೇಷನ್ ನೇತೃತ್ವದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಮುಖಂಡರಾದ ಬಸನಗೌಡ ಹಡಲಗೇರಿ, ಜಿ.ಜಿ. ಅಸ್ಕಿ, ಗುರಣ್ಣ ಹತ್ತೂರ, ಡಾ. ಬಸವರಾಜ ಅಸ್ಕಿ, ವಿವೇಕಾನಂದ ದ್ಯಾಪೂರ, ಬಾಪುಗೌಡ ದ್ಯಾಪೂರ, ಮುದೆಪ್ಪಗೌಡ ಹಡಲಗೇರಿ(ಸೋಮನಗೌಡ), ಶಾಂತಗೌಡ ಜಾಲಿಕಟ್ಟಿ, ಗ್ರಾಪಂ ಮಾಜಿ ಅಧ್ಯಕ್ಷ ಶಂಕರಗೌಡ ಲಿಂಗದಳ್ಳಿ, ಮುತ್ತುಗೌಡ ಹಿಪ್ಪರಗಿ, ಬಸನಗೌಡ ದ್ಯಾಪೂರ, ಬಾಪುಗೌಡ ಹಿರೇಗೌಡರ, ರಾಮನಗೌಡ ಪಾಟೀಲ, ರಹೇಮಸಾಬ ಅವಟಿ, ಸಿದ್ದನಗೌಡ ನೀರಲಗಿ ಇತರರಿದ್ದರು.

ಕೊಣ್ಣೂರ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯನ್ನು ಎಲ್ಲ ಮುಖಂಡರು ಸೇರಿ ಪಕ್ಷಾತೀತವಾಗಿ ಯಾವುದೇ ಗೊಂದಲಗಳಿಲ್ಲದೇ ಚುನಾವಣೆ ನಡೆಯುವಂತೆ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಕ್ಷೇತ್ರದ ಶಾಸಕರ ಜತೆಗೂಡಿ ಅವರ ಸಹಕಾರದೊಂದಿಗೆ ಎಲ್ಲ ಸದಸ್ಯರು ಗ್ರಾಮದಲ್ಲಿ ಅಭಿವೃದ್ಧಿ ಕಾರ್ಯ ಮಾಡಲಿದ್ದಾರೆ.
ಸಿ.ಬಿ. ಅಸ್ಕಿ, ಅಧ್ಯಕ್ಷರು ಅಸ್ಕಿ ಪೌಂಡೇಷನ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net