

ಹುಬ್ಬಳ್ಳಿ : ಕೊಂಕಣ ಮರಾಠ ಸಮಾಜದವರು ಪ್ರಬಲ ಹಿಂದುತ್ವವಾದಿಗಳು. ಇವರಲ್ಲಿ ದೇಶಭಕ್ತಿ, ನಿಷ್ಠೆ ಅಪಾರವಾಗಿದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಇಲ್ಲಿನ ವಿದ್ಯಾನಗರದ ಬನಶಂಕರಿ ಬಡಾವಣೆಯಲ್ಲಿ ಆಯೋಜಿಸಿದ್ದ ಹುಬ್ಬಳ್ಳಿ -ಧಾರವಾಡ ಕೊಂಕಣ ಮರಾಠಾ ಸಮಾಜದ 40ನೇ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೊಂಕಣ ಮರಾಠಾ ಸಮಾಜ ಬಾಂಧವರು ಶ್ರಮ ಜೀವಿಗಳು. ವೃತ್ತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇತರ ಸಮಾಜಗಳಿಗೆ ಈ ಸಮಾಜವು ಮಾದರಿಯಾಗಿದೆ ಎಂದರು.
ಸಮಾಜದ ವಿವಿಧ ಅಭಿವೃದ್ಧಿ ಕಾರ್ಯಗಳಿಗಾಗಿ ತಮ್ಮ ಶಾಸಕರ ಅನುದಾನದಲ್ಲಿ 10 ಲಕ್ಷ ರೂ. ನೀಡುವುದಾಗಿ ಘೋಷಿಸಿದ ಶಾಸಕ ಟೆಂಗಿನಕಾಯಿ, ಮುಂದಿನ ದಿನಗಳಲ್ಲಿ ಸಮಾಜಕ್ಕೆ ಬೇಕಾದ ನೆರವು ನೀಡಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ರವಿ ನಾಯಕ ಮಾತನಾಡಿ, ನಮ್ಮ ಸಮುದಾಯ ಸಮಾಜಿಮುಖಿ ಕಾರ್ಯಗಳಲ್ಲಿ ತೊಡಗಿದೆ ಎಂದರು.
ರಾಷ್ಟ್ರ ಪತಿ ಪದಕ ಪುರಸ್ಕೃತೆ ನೀಲಿಮಾ ರಾಣೆ ಹಾಗೂ ಧಾರವಾಡದ ಕೆಸಿಡಿ ಮಹಾವಿದ್ಯಾಲಯದ ವಿಜ್ಞಾನ ವಿಭಾಗದ ಪ್ರಾಚಾರ್ಯರಾದ ಮಂಜಲಿ ಸಾಳುಂಕೆ ಅತಿಥಿಗಳಾಗಿದ್ದರು.
ನಿವೃತ್ತ ಜಿಲ್ಲಾಧಿಕಾರಿ ಎಸ್.ವಿ. ನಾಯ್ಕರಾಣಿ, ಉಪನ್ಯಾಸಕ ಡಾ. ಸಾವಂತ, ನಿವೃತ್ತ ತಹಶೀಲ್ದಾರ್ ಶಿವಾನಂದ ರಾಣೆ, ನಿವೃತ್ತ ಪೊಲೀಸ್ ಅಧಿಕಾರಿ ಅರುಣ ಕುಮಾರ ಸಾಳುಂಕೆ, ಏಷ್ಯನ್ ಗೇಮ್ಸ್ ಮಾಸ್ಟರ್ ಸ್ಪರ್ಧೆಯಲ್ಲಿ ಶಾಟ್ಫುಟ್ನಲ್ಲಿ ಬಂಗಾರದ ಪದಕ ವಿಜೇತ ಪ್ರಮೋದ ನಾಯ್ಕ ಸೇರಿದಂತೆ ಸೇವಾ ನಿವೃತ್ತಿ ಹೊಂದಿರುವ ಸಮಾಜದ ವಿವಿಧ ಗಣ್ಯರನ್ನು ಸನ್ಮಾನಿಸಲಾಯಿತು.
ಸಮಾಜದ ಕಾರ್ಯದರ್ಶಿ ಸುರೇಂದ್ರ ಗಾಂವಕರ, ನಿರ್ಮಲಾ ರಾಣಿ, ಅಶೋಕ ನಾಯ್ಕ, ಸದಾನಂದ ನಾಯ್ಕ, ಸುನಿಲ ನಾಯ್ಕ, ವಿನೋದ ಸೈಲ್, ಸಂಜೀವ ನಾಯ್ಕ, ಇತರರು ಇದ್ದರು.