ಆ.23ರಿಂದ ಸೆ.14ರವರೆಗೆ ಫಿಲ್ಮ್ ಸೊಭಾಣ್ ಕೊಂಕಣಿ ಚಲನ ಚಿತ್ರೋತ್ಸವ

kkkkkkkkkkkkkk
Published on


ಮಂಗಳೂರು : ಕೊಂಕಣಿ ಮಾನ್ಯತಾ ದಿನಾಚರಣೆಯ ಅಂಗವಾಗಿ ಕೊಂಕಣಿಯ ಪ್ರಮುಖ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್ ಆ.23ರಿಂದ ಸೆ.14ರವರೆಗೆ ಫಿಲ್ಮ್ ಸೊಭಾಣ್ ಕೊಂಕಣಿ ಚಲನ ಚಿತ್ರೋತ್ಸವ ನಡೆಯಲಿದೆ. ಮಂಗಳೂರಿನ ಭಾರತ್ ಸಿನಿಮಾದಲ್ಲಿ ಸಾಯಂಕಾಲ 4ರಿಂದ 7ರವರೆಗೆ ಎರಡು ದೇಖಾವೆ ನಡೆಯಲಿದೆ. 23 ದಿನಗಳಲ್ಲಿ 25 ಚಲನಚಿತ್ರ ಮತ್ತು 5 ಕಿರುಚಿತ್ರಗಳು ಪ್ರದರ್ಶನಗೊಳ್ಳಲಿವೆ. ಮಕ್ಕಳಿಗಾಗಿ 2 ಚಲನ ಚಿತ್ರಗಳ ವಿಶೇಷ ಪ್ರದರ್ಶನಗಳು ನಡೆಯಲಿವೆ.
ಪ್ರದರ್ಶನದಲ್ಲಿ ಆಯಾ ಸಿನೆಮಾದ ನಿರ್ಮಾಪಕ, ನಿರ್ದೇಶಕರನ್ನು ಸನ್ಮಾನಿಸಲಾಗುವುದು. ಸೆ.1ರಂದು ಬೆಳಗ್ಗೆ ಕೊಂಕಣಿ ಸಿನೆಮಾ ಕ್ಷೇತ್ರದ ಪಂಥಾಹ್ವಾನಗಳು ಹಾಗೂ ಬೆಳವಣಿಗೆಯ ಸಾಧ್ಯತೆಗಳ ಬಗ್ಗೆ ವಿಚಾರ ಸಂಕಿರಣವನ್ನು ಕಲಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net