ಕೊಂಕಣ ರೈಲ್ವೆ ವಿಲೀನಕ್ಕೆ ಮನವಿ

Udp_Kota srinivas
Published on

ಉಡುಪಿ: ಕರಾವಳಿ-ಮಲೆನಾಡು ಭಾಗದಲ್ಲಿ ರೈಲ್ವೆ ಸಂಚಾರದ ಪ್ರಮುಖ ನಾಲ್ಕು ವಿಚಾರಗಳ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಸಂಸದ ಕೋಟ ಶ್ರೀನಿವಾಸ ಪೂಜಾರಿ ಗುರುವಾರ ಭೇಟಿಯಾಗಿ ವಾತುಕತೆ ನಡೆಸಿದರು.

ಈಗಾಗಲೇ ಬರುತ್ತಿರುವ ಎರ್ನಾಕುಲಂ ನಿಜಾಮುದ್ದೀನ್ ರೈಲನ್ನು ಕುಂದಾಪುರದಲ್ಲಿ ನಿಲುಗಡೆ ಮಾಡುವಂತೆ, ಮತ್ಸ್ಯಗಂಧಾ ರೈಲಿನ ಬೋಗಿಗಳು ಹಳೆಯ ಐಸಿಎ್ ವಾದರಿಯದಾಗಿದ್ದು, ಅದನ್ನು ಆಧುನಿಕರಣಗೊಳಿಸಿ ಎಲ್‌ಎಚ್‌ಬಿ ಕೋಚ್ ಮೇಲ್ದರ್ಜೆಗೆ ಏರಿಸುವಂತೆ ವಿನಂತಿಸಿದರು.

ಬಹುದಿನದ ಬೇಡಿಕೆಯಾದ ಕೊಂಕಣ ರೈಲ್ವೆಯನ್ನು ಭಾರತ್ ರೈಲ್ವೆಯಲ್ಲಿ ವಿಲೀನ ವಾಡಬೇಕೆಂಬ ಮನವಿ ನೀಡಿದರು. ಕೊಂಕಣ ರೈಲ್ವೆ ವಿಲೀನದ ಕುರಿತಂತೆ ಕೂಡಲೇ ರಾಜ್ಯ ಸರ್ಕಾರದಿಂದ ವರದಿ ತರಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net