

ಕಾರವಾರ:ಬೆಂಗಳೂರು-ಮುರ್ಡೇಶ್ವರ ಎಕ್ಸ್ಪ್ರೆಸ್ ರೈಲು(16585/86)ನ್ನು ಮಡಗಾಂವ ವರೆಗೆ ವಿಸ್ತರಿಸಲು ರೈಲ್ವೆ ಮಂಡಳಿಗೆ ಮರು ಪ್ರಸ್ತಾವನೆ ಸಲ್ಲಿಸಲು ಕೊಂಕಣ ರೈಲ್ವೆ ಬಳಕೆದಾರರ ಸಮಿತಿಯ ಸಭೆಯಲ್ಲಿ ನಿರ್ಣಯಿಸಲಾಗಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಅವರ ಕಚೇರಿಯ ಪ್ರಕಟಣೆ ತಿಳಿಸಿದೆ.
ಕಾಗೇರಿ ಅವರ ಅಧ್ಯಕ್ಷತೆಯಲ್ಲಿ ಮಡಗಾಂವನಲ್ಲಿ ಗುರುವಾರ ಸಭೆ ನಡೆಯಿತು. ಕೇರಳ, ಕರ್ನಾಟಕ, ಗೋವಾ ರಾಜ್ಯಗಳ ಪ್ರತಿನಿಽಗಳು ಭಾಗವಹಿಸಿದ್ದರು. ಈ ರಾಜ್ಯಗಳ ಪ್ರಮುಖ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದು ವಿವರಿಸಲಾಗಿದೆ.
ಕಾರವಾರ-ಮಡಗಾಂ ಮೆಮು ರೈಲನ್ನು ಗೋವಾದ ಪೆರ್ನೆಂವರೆಗೆ ವಿಸ್ತರಿಸಲು ನಿರ್ಣಯ ಕೈಗೊಂಡಿದ್ದು, ಈ ವಿಸ್ತರಣೆಯು ಶೀಘ್ರದಲ್ಲೇ ಜಾರಿಗೆ ಬರಲಿದೆ ಎಂದು ಕೊಂಕಣ ರೈಲ್ವೆ ಅಧಿಕಾರಿಗಳೂ ಸಭೆಗೆ ತಿಳಿಸಿದರು.
ಕಾರವಾರ-ಬೆಂಗಳೂರು ಪಂಚಗAಗಾ ಎಕ್ಸ್ಪ್ರೆಸ್ ರೈಲು ಸಂಖ್ಯೆ 16595/96 ರೈಲು ಸದ್ಯ 19 ಬೋಗಿಗಳ ಜತೆಗೆ ಓಡುತ್ತಿದ್ದು, ಇನ್ನೂ 3 ಹೆಚ್ಚುವರಿ ಬೋಗಿಗಳನ್ನು ಸೇರಿಸಲು ರೈಲ್ವೆ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲು ಸೂಚಿಸಲಾಯಿತು.ಉತ್ತರ ಕನ್ನಡ ಜಿಲ್ಲೆಯ ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಅನುಕೂಲವಾಗಲು ಪ್ಲಾಟ್ ಫಾರ್ಮ್, ಶೆಲ್ಟರ್ ಮತ್ತು ಇತರೆ ಸೌಕರ್ಯಗಳನ್ನು ಒದಗಿಸಲು ಸೂಚಿಸಲಾಯಿತು. ಕೊಂಕಣ ರೈಲ್ವೆ ಎಂಡಿ. ಸಂತೋಷ್ ಕುಮಾರ್ ಝಾ, ಎಂಟು ಲೋಕಸಭಾ ಸದಸ್ಯರು ರ‍್ಯಾಆಲ್ಗೊಂಡಿದ್ದರು ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.
ಆ್ಯಪ್ ಬಿಡುಗಡೆ:
ಕೊಂಕಣ ರೈಲ್ವೆಗೆ ಸಂಬAಽಸಿದ ಮಾಹಿತಿಯನ್ನು ಸುಲಭವಾಗಿ ಪಡೆಯಲು ಸಹಾಯ ಮಾಡುವ ಹೊಸ ಮೊಬೈಲ್ ಅಪ್ಲಿಕೇಶನ್ `ಕೆ.ಆರ್. ಮಿರರ್ ಅನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಬಿಡುಗಡೆ ಮಾಡಿದರು. ಈ ಆ್ಯಪ್ ಮೂಲಕ ಪ್ರಯಾಣಿಕರು ರೈಲುಗಳ ಸ್ಥಿತಿ, ವೇಳಾಪಟ್ಟಿ ಮತ್ತು ಇತರೆ ಸೇವೆಗಳ ಕುರಿತು ಮಾಹಿತಿ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.