ಕಾರವಾರ: ಚಲಿಸುತ್ತಿದ್ದ ರೈಲಿನಿಂದ ಬಿದ್ದ ಪ್ರಯಾಣಿಕರೊಬ್ಬರ ಟ್ರಾಲಿ ಬ್ಯಾಗ್ ಒಂದನ್ನು ಸುರಕ್ಷಿತವಾಗಿ ವಾಪಸ್ ಕೊಂಕಣ ರೈಲ್ವೆ ಸಿಬ್ಬಂದಿ ಮರಳಿಸಿದ್ದಾರೆ.
ಮಂಗಳೂರು ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16595) ನಲ್ಲಿ ಪ್ರಯಾಣಿಸುತ್ತಿದ್ದ ಪ್ರಿಯಾ ಎಂಬುವವರ ಬ್ಯಾಗ್ ಉಡುಪಿ ನಿಲ್ದಾಣದದ ಸಮೀಪ ರೈಲಿನಿಂದ ಕೆಳಗೆ ಬಿದ್ದಿತು.ಅವರು ತಕ್ಷಣ ಈ ವಿಷಯವನ್ನು ಉಡುಪಿ ಆರ್ ಪಿಎಫ್ ಸಿಬ್ಬಂದಿಗೆ ತಿಳಿಸಿದ್ದರು.
ಸಿಬ್ಬಂದಿ ಚುರುಕಿನ ಕ್ರಮ ಕೈಗೊಂಡು, ಟ್ರ್ಯಾಕ್ ಸುರಕ್ಷತಾ ಸಿಬ್ಬಂದಿ ದಯಾನಂದ ಅವರ ಸಹಕಾರದಿಂದ ಬಿದ್ದ ಟ್ರಾಲಿ ಬ್ಯಾಗ್ ನ್ನು ತರಿಸಿ ಪ್ರಿಯಾ ಅವರಿಗೆ ಮರಳಿಸಿದರು. ಟ್ರಾಲಿಯಲ್ಲಿದ್ದ 3 ಚಿನ್ನದ ಉಂಗುರಗಳು ಸೇರಿ ಸುಮಾರು 40 ಸಾವಿರ ರೂ. ಮೌಲ್ಯದ ಆಭರಣಗಳು ಇದ್ದವು.
ಕೊಂಕಣ ರೈಲ್ವೆ ಹಾಗೂ ಆರ್ ಪಿಎಫ್ ಕಾರ್ಯಕ್ಕೆ ಶ್ಲಾಘನೆ ವ್ಯಕ್ತವಾಗಿದೆ.