

ಕಾರವಾರ: ಕೊಂಕಣ ರೈಲ್ವೆ ಯೋಜನೆಗೆ ಭೂಮಿ ನೀಡಿದ ಸುಮಾರು 1 ಸಾವಿರ ಕುಟುಂಬಗಳಿಗೆ ಹೆಚ್ಚುವರಿ ಪರಿಹಾರ ನೀಡುವುದು ಇದುವರೆಗೂ ಬಾಕಿ ಇದೆ. ಕೆಲವು ಪ್ರಕರಣಗಳು ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುತ್ತಿದೆ. ಭೂ ಸ್ವಾಧೀನ ಕಾಯ್ದೆ 28ಎ ಅಡಿ ದಾಖಲಾದ ಇನ್ನಷ್ಟು ಪ್ರಕರಣಗಳು ವಿವಿಧ ಎಸಿಗಳ ಹಂತದಲ್ಲಿದೆ. ಅವುಗಳನ್ನು ಶೀಘ್ರದಲ್ಲಿ ವಿಲೇವಾರಿ ಮಾಡಲು ಡಿಸಿ, ಎಸಿಗಳ ಸಭೆ ನಡೆಸಿ, ಸೂಚನೆ ನೀಡಿದ್ದೇನೆ.
ಕಾರವಾರ ರೈಲು ನಿಲ್ದಾಣದಲ್ಲಿ ರೈಲುಗಳಿಗೆ ನೀರು ಪೂರೈಸಲು ಕೊಂಕಣ ರೈಲ್ವೆ ಸಿದ್ಧವಿದ್ದು, ಅಹತ್ಯ ಸಹಕಾರ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ. ಕೊಂಕಣ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲಿ ಸೋಮವಾರ ಭಾಗವಹಿಸಿ, ಕುಮಟಾ, ಗೋಕರ್ಣ ನಿಲ್ದಾಣಗಳ ಫ್ಲಾಟ್‌ಫಾರ್ಮ್ ಎತ್ತರಿಸಲು ಸೂಚಿಸಿದ್ದೇನೆ. ಇನ್ನಷ್ಟು ಮೂಲ ಸೌಕರ್ಯ ಒದಗಿಸುವ ಬಗ್ಗೆ, ಚರ್ಚಿಸಿದ್ದೇನೆ ಎಂದರು.