

ಆರ್ಡಿ: ಆರ್ಡಿ ಸಮೀಪದ ಕೊಂಜಾಡಿ ಶ್ರೀ ದುರ್ಗಾಪರಮೇಶ್ವರಿ ದೇವಳ ವಾರ್ಷಿಕ ಕೆಂಡಸೇವೆ, ಜಾತ್ರಾ ಮಹೋತ್ಸವ ವಿವಿಧ ಧಾರ್ಮಿಕ ವಿಧಿ ವಿಧಾನಗಳು, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಇತ್ತೀಚೆಗೆ ಸಂಪನ್ನಗೊಂಡಿತು.
ಪುಣ್ಯಾಹ ವಾಚನ, ಪ್ರಧಾನ ಹೋಮ, ಕಲಶಾಭೀಷೇಕ, ಉದ್ಯಮಿಗಳಾದ ಪ್ರವೀಣ್‌ಕುಮಾರ್ ಶೆಟ್ಟಿ ಮತ್ತು ಮಕ್ಕಳು ಕೊಂಜಾಡಿ ಹಡಿಗಾರಮನೆ ಅವರಿಂದ ಹೂವಿನ ಅಲಂಕಾರ ಸೇವೆ, ಚಂಡಿಕಾ ಹೋಮ ಸೇವೆ, ಹಣ್ಣು ಕಾಯಿ, ಹರಿವಾಣ ನೈವೇದ್ಯ, ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ತೂಂಬಿನಕೆರೆ ಸುಮನ ಎನ್.ಹೆಗ್ಡೆ ಮತ್ತು ಮಕ್ಕಳಿಂದ ಅನ್ನಸಂತರ್ಪಣೆ ಸೇವೆ, ರಾತ್ರಿ ಗಂಟುಬೀಳು ಅಂಗನವಾಡಿ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಆರ್ಡಿ ಅಂಗನವಾಡಿ ಕೇಂದ್ರ ಪುಟಾಣಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಧಾರ್ಮಿಕ ಸಭಾ ಕಾರ್ಯಕ್ರಮ, ವಾಗ್ಮಿ ಹಾರಿಕಾ ಮಂಜುನಾಥ ಬೆಂಗಳೂರು ಅವರಿಂದ ಧಾರ್ಮಿಕ ಪ್ರವಚನ, ತೆಕ್ಕಟ್ಟೆ ಕನ್ನುಕೆರೆ ಓಂಕಾರ್ ಕಲಾವಿದರಿಂದ ಆಪುದೆಲ್ಲಾ ಒಳ್ಳೆಯದಕ್ಕೆ ನಾಟಕ, ದರ್ಶನ, ಕೆಂಡೋತ್ಸವ, ರಂಗಪೂಜೆ, ಢಕ್ಕೆ ಬಲಿ, ಸುತ್ತುಬಲಿ, ಪ್ರಸಾದ ವಿತರಣೆ ನಡೆಯಿತು.