ಸಿದ್ದರಹಳ್ಳಿಯಲ್ಲಿ ಕೊಂಡೋತ್ಸವ

ಸಿದ್ದರಹಳ್ಳಿ ಗ್ರಾಮದ ಶ್ರೀ ಬನಶಂಕರಿ ಅಮ್ಮನವರ ದೇಗುಲ ಆವರಣದಲ್ಲಿ ದೇವರನ್ನು ಹೊತ್ತವರು ಕೊಂಡ ಹಾಯುತ್ತಿರುವುದು.
ಸಿದ್ದರಹಳ್ಳಿ ಗ್ರಾಮದ ಶ್ರೀ ಬನಶಂಕರಿ ಅಮ್ಮನವರ ದೇಗುಲ ಆವರಣದಲ್ಲಿ ದೇವರನ್ನು ಹೊತ್ತವರು ಕೊಂಡ ಹಾಯುತ್ತಿರುವುದು.
Published on

ಬೇಲೂರು: ತಾಲೂಕಿನ ಸಿದ್ದರಹಳ್ಳಿ ಗ್ರಾಮದ ಶ್ರೀ ಬನಶಂಕರಿ ಅಮ್ಮನವರ ದೇಗುಲದಲ್ಲಿ ನವರಾತ್ರಿ ಅಂಗವಾಗಿ ಗುರುವಾರ ನೂರಾರು ಭಕ್ತರ ಸಮ್ಮುಖದಲ್ಲಿ ಕೊಂಡೋತ್ಸವ ಭಕ್ತಿ ಭಾವದಿಂದ ನೆರವೇರಿತು.

ನವರಾತ್ರಿಯ 9 ದಿನವೂ ವಿವಿಧ ಪೂಜಾ ಕೈಂಕರ್ಯಗಳು ಗ್ರಾಮಸ್ಥರ ಸಮ್ಮುಖದಲ್ಲಿ ನೆರವೇರಿತು. ಕೊಂಡೋತ್ಸವ ಅಂಗವಾಗಿ ವಿವಿಧ ಬಗೆಯ ಪುಷ್ಪಗಳಿಂದ ಬನಶಂಕರಿ ಅಮ್ಮನವರನ್ನು ಅಲಂಕರಿಸಲಾಗಿತ್ತು.

ಇದಕ್ಕೂ ಮುನ್ನ ವಿವಿಧ ಪೂಜಾ ವಿಧಿ ವಿಧಾನಗಳನ್ನು ಅರ್ಚಕರು ನೆರವೇರಿಸಿದರು. ಕಳಸ ಹಾಗೂ ದೇವರನ್ನು ಹೊತ್ತವರು ಮೆರವಣಿಗೆಯಲ್ಲಿ ಸಾಗಿದರು. ನಂತರ ದೇಗುಲ ಆವರಣದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಕೊಂಡವನ್ನು ತುಳಿದು ದೇವರ ಕೃಪೆಗೆ ಪಾತ್ರರಾದರು. ಕೊಂಡೋತ್ಸವಕ್ಕೆ ತಾಲೂಕಿನ ಭಕ್ತರಲ್ಲದೆ ರಾಜ್ಯದ ಹಲವು ಭಾಗಗಳಿಂದ ಆಗಮಿಸಿ ಅಮ್ಮನವರ ದರ್ಶನ ಪಡೆದು ಪೂಜೆ ಸಲ್ಲಿಸಿ ಪುನೀತರಾದರು.

ಕೊಂಡೋತ್ಸವಕ್ಕೆ ಆಗಮಿಸಿದ್ದ ಎಲ್ಲರಿಗೂ ದೇವಾಲಯದ ಆಡಳಿತ ಮಂಡಳಿಯಿಂದ ದಾಸೋಹ ವ್ಯವಸ್ಥೆ ಏರ್ಪಡಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net