ತಿಪ್ಪೇಶನ ಮಾಲಾಧಾರಣೆ ಆರಂಭ

K HALLI THIPPESHA MALE(A).D (2)
Published on

ಕೊಂಡ್ಲಹಳ್ಳಿ: ಇಲ್ಲಿನ ಬಿಳಿನೀರು ಚಿಲುಮೆ ಪುಣ್ಯಕ್ಷೇತ್ರದ ತಿಪ್ಪೇರುದ್ರಸ್ವಾಮಿ ದೇಗುಲದಲ್ಲಿ ರುದ್ರಾಕ್ಷಿಮಾಲೆ ಧಾರಣೆ ಆಚರಣೆ ನಡೆಯಿತು.

ಶ್ರೀಕ್ಷೇತ್ರದ ಸನ್ನಿಧಿಗೆ ಬಂದ ಭಕ್ತರು ಪ್ರಧಾನ ಅರ್ಚಕ ಶಿವಕುಮಾರ ಶಾಸ್ತ್ರಿ ಮತ್ತು ಗುರು ಮಾಲಾಧಾರಿಗಳಿಂದ ಮಾಲೆ ಧರಿಸಿದರು. ಈ ಆಚರಣೆ 9, 11, 21 ದಿನ ಮತ್ತು ಒಂದು ತಿಂಗಳವರೆಗೂ ನಡೆಯುತ್ತದೆ.

ಸಂಕ್ರಾಂತಿ ಮುನ್ನ ದಿನ ಇದೇ ಬಿಳಿನೀರು ಚಿಲುಮೆ ಕ್ಷೇತ್ರಕ್ಕೆ ಬಂದು ತಿಪ್ಪೇಶ ಮಾಲಾಧರಿಗಳು ಅಂತಿಮ ವಿಧಿ ವಿಧಾನ ಕೈಗೊಳ್ಳುವರು ಎಂದು ದೊಡ್ಡಸಿದ್ದವ್ವನಹಳ್ಳಿ ತಿಪ್ಪೇಸ್ವಾಮಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net