

ಕೊಂಡ್ಲಹಳ್ಳಿ: ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಹಾಗೂ ಗ್ರಾಮಾಂತರ ಪ್ರೌಢಶಾಲೆ ಮಕ್ಕಳಿಗೆ ಬುಧವಾರ ಅಕ್ಷರ ದಾಸೋಹ ಯೋಜನೆಯಡಿ ಆಹಾರ ಧಾನ್ಯ ವಿತರಿಸಲಾಯಿತು.
ಮಾ.14ರಿಂದ ಏ.9ರ ವರೆಗಿನ 21 ದಿನಗಳ ಕರೊನಾ ರಜಾವಧಿಯ 1ರಿಂದ 5ನೇ ತರಗತಿ ಮಕ್ಕಳಿಗೆ ದಿನದ ಲೆಕ್ಕದಂತೆ 100 ಗ್ರಾಂ ಅಕ್ಕಿ, 50 ಗ್ರಾಂ ಬೇಳೆ. 6 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ 150 ಗ್ರಾಂ ಅಕ್ಕಿ, 75 ಗ್ರಾಂ ಅಕ್ಕಿ ವಿತರಿಸಲಾಯಿತು.
ಮುಖ್ಯಶಿಕ್ಷಕ ಹುಲಿಕುಂಟೆಪ್ಪ, ಶಿಕ್ಷಕ ಎ.ಟಿ.ತಿಪ್ಪೇಸ್ವಾಮಿ, ಬಿಸಿಯೂಟ ಸಿಬ್ಬಂದಿ ಅಂಜಿನಮ್ಮ, ಜ್ಯೋತಮ್ಮ, ಸತ್ಯಕ್ಕ ಇತರರಿದ್ದರು.