ಆಂಜನೇಯಸ್ವಾಮಿ ಪಲ್ಲಕ್ಕಿ ಉತ್ಸವ

K HALLI PALLAKKI.F.10.
Published on

ಕೊಂಡ್ಲಹಳ್ಳಿ: ಗ್ರಾಮದಲ್ಲಿ ಸೋಮವಾರ ಆಂಜನೇಯಸ್ವಾಮಿ ರಥೋತ್ಸವದ ಅಂಗವಾಗಿ ಪಲ್ಲಕ್ಕಿಯ ಉತ್ಸವ ನಡೆಯಿತು.

ಚಿತ್ರದುರ್ಗ ಜಿಲ್ಲೆ ಹಾಗೂ ಆಂಧ್ರದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಾವಿರಾರು ಭಕ್ತರು ಹರಕೆ ಸಲ್ಲಿಸಿದರು. ಮಲ್ಲಿಗೆ, ಕನಕಾಂಬರ ಇತರೆ ಪುಷ್ಪಗಳಿಂದ ಅಲಂಕರಿಸಿದ್ದ ಹೂವಿನ ಪಲ್ಲಕ್ಕಿಯಲ್ಲಿ ಆಂಜನೇಯ ಸ್ವಾಮಿ ಪ್ರತಿಷ್ಠಾಪಿಸಿ ಗ್ರಾಮದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಟಿ.ಸಿದ್ದಲಿಂಗಪ್ಪ, ಡಿ.ಷಡಕ್ಷರಪ್ಪ, ಬಿ.ಚನ್ನಬಸಪ್ಪ, ವಿ.ಚಿದಾನಂದಪ್ಪ, ಆರ್.ಕೆ.ತಿಪ್ಪೇಸ್ವಾಮಿ, ಕುಂಬಾರ್ ಗುರುಮೂರ್ತಪ್ಪ, ಟಿ.ಯಲ್ಲಪ್ಪ, ಟೈಲರ್ ರವಿ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net