

ಕೊಂಡ್ಲಹಳ್ಳಿ: ಗ್ರಾಮಗಳಿಗೆ ವೈದ್ಯಕೀಯ ಸೇವೆ ಒದಗಿಸುವ ಸರ್ಕಾರಿ ಸಂಚಾರಿ ಚಿಕಿತ್ಸಾ ವಾಹನ ರುದ್ರಮ್ಮನಹಳ್ಳಿ ಸಮೀಪದ ರೈಲ್ವೆ ಕೆಳಸೇತುವೆಯಲ್ಲಿ ಸಂಗ್ರಹವಾದ ಮಳೆ ನೀರಲ್ಲಿ ಗಂಟೆಗಟ್ಟಲೇ ನಿಂತು ವೈದ್ಯ ಸಿಬ್ಬಂದಿ ಪರದಾಡಿದ ಘಟನೆ ಸೋಮವಾರ ನಡೆದಿದೆ.
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಹಳ್ಳಿಗಳಿಗೆ ವೈದ್ಯಸೇವೆ ನೀಡುವ ಚಳ್ಳಕೆರೆ ತಾಲೂಕಿನ ಸಂಚಾರಿ ವಾಹನ, ಬೆಳಗ್ಗೆ ಕಾಕಿಬೋರನಹಟ್ಟಿಗೆ ಬಂದಿದೆ.
ಅಲ್ಲಿಂದ ಮರಳುವಾಗ ರೈಲ್ವೆ ಕೆಳಸೇತುವೆಯಲ್ಲಿ ಸಂಗ್ರಹವಾದ ನೀರು ಇಂಜಿನ್‌ನಲ್ಲಿ ಸೇರಿ ವಾಹನ ಅಲ್ಲೇ ನಿಂತಿದೆ. ವಾಹನದಲ್ಲಿ ಡಾ.ದಿಲೀಪ್‌ಕುಮಾರ್, ಫಾರ್ಮಾಸಿಸ್ಟ್ ಶಿವಸ್ವಾಮಿ, ಅಡ್ಮಿನ್ ಎಂ.ತಿಪ್ಪೇಸ್ವಾಮಿ ಇದ್ದರು. ವಿಷಯ ತಿಳಿದ ಗ್ರಾಮಸ್ಥರು, ಸ್ಥಳಕ್ಕೆ ಬಂದು ಟ್ರಾೃಕ್ಟರ್ ಸಹಾಯದಿಂದ ವಾಹನ ಹೊರತೆಗೆದರು. ಸಂಜೆ ಟ್ರಾೃಕ್ಟರ್ ಮೂಲಕ ಚಳ್ಳಕೆರೆಗೆ ಕೊಂಡೊಯ್ಯಲಾಯಿತು. ಗ್ರಾಮಸ್ಥರಾದ ಮೋಹನ್, ಸುರೇಶ್, ರವಿ ಇತರರು ವಾಹನ ಹೊರತೆಗೆಯುವಲ್ಲಿ ನೆರವಾದರು.