ಶೌಚಗೃಹ ಕೊರತೆಗೆ ಮಕ್ಕಳು ತತ್ತರ

K HALLI MARAMMANAHALLI(A).D.28
Published on

ಕೊಂಡ್ಲಹಳ್ಳಿ: ಶೌಚಗೃಹ ಸಮಸ್ಯೆಯಿಂದ ಮಾರಮ್ಮನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ.

ಶಾಲೆ ಆವರಣದಲ್ಲಿ ಎರಡು ಶೌಚಗೃಹಗಳು ದುಸ್ಥಿತಿ ತಲುಪಿವೆ. ಕಟ್ಟಡಕ್ಕೆ ಕನಿಷ್ಠ ನೀರು ಪೂರೈಕೆ ಮಾಡುವ ಸೌಲಭ್ಯವಿಲ್ಲ. ಮೂತ್ರ ವಿಸರ್ಜನೆಗೆ ಮಕ್ಕಳು ಬಯಲಿಗೆ ಹೋಗುತ್ತಾರೆ. ಕೆಲ ಮಕ್ಕಳು ಬಿಸಿಯೂಟ ತಯಾರಿಸುವ ಕೊಠಡಿ ಪಕ್ಕವೇ ಮೂತ್ರ ವಿಸರ್ಜನೆ ಮಾಡುವುದರಿಂದ ದುರ್ವಾಸನೆ ಬೀರುತ್ತಿದೆ. 125 ಕ್ಕೂ ಹೆಚ್ಚು ಮಕ್ಕಳು ಕಲಿಯುತ್ತಿರುವ ಶಾಲೆಯಲ್ಲಿ ಕನಿಷ್ಠ ಸೌಲಭ್ಯಗಳ ಬಗ್ಗೆ ಜಾಗೃತಿ ವಹಿಸಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಕೂಡಲೇ ಶಾಲೆಗೆ ಶೌಚಗೃಹ ಸೇರಿ ಅಗತ್ಯ ಸೌಲಭ್ಯ ಒದಗಿಸಲು ಶಿಕ್ಷಣ ಇಲಾಖೆ ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net