ಕೊಂಡ್ಲಹಳ್ಳೀಲಿ ಆಂಜನೇಯ ತೇರು

K HALLI TERU(A).F (2)
Published on

ಕೊಂಡ್ಲಹಳ್ಳಿ: ಕೊಂಡ್ಲಹಳ್ಳಿಯಲ್ಲಿ ಭಾನುವಾರ ಆಂಜನೇಯಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನೆರವೇರಿತು.

ಬೆಳಗ್ಗೆ ರುದ್ರಾಭಿಷೇಕ, ಬಲಿ ಅನ್ನ ಸಮರ್ಪಣೆ ಬಳಿಕ ದೇವರನ್ನು ರಥದಲ್ಲಿ ಪ್ರತಿಷ್ಟಾಪಿಸಲಾಯಿತು. ನಂತರ ರಥೋತ್ಸವ ಸಂಭ್ರಮದಿಂದ ಜರುಗಿತು.

ನಂದಿಕೋಲು, ಡೊಳ್ಳು, ತಮಟೆ ಸೇರಿ ವಿವಿಧ ಕಲಾತಂಡಗಳು ಗಮನ ಸೆಳೆದವು. ರಾಜ್ಯ ಹಾಗೂ ನೆರೆಯ ಸೀಮಾಂಧ್ರದಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು.

ಸೇವಾ ಸಮಿತಿ ಮುಖಂಡರಾದ ಟಿ.ಸಿದ್ದಲಿಂಗಪ್ಪ, ಡಿ.ಷಡಕ್ಷರಪ್ಪ, ಟಿ.ಯಲ್ಲಪ್ಪ, ಬಿ.ಚನ್ನಬಸಪ್ಪ, ಗುರುಮೂರ್ತಿ, ಆರ್.ಕೆ.ತಿಪ್ಪೇಸ್ವಾಮಿ, ಎಚ್.ಟಿ.ರಾಮಚಂದ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net