ಕಲ್ಪರಸ ನೀರಾಕ್ಕೆ ಬೇಡಿಕೆ ಕುಸಿತ

K HALLI KUSITA 13
Published on

ಕೊಂಡ್ಲಹಳ್ಳಿ: ರಾಜ್ಯ ಸರ್ಕಾರ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದರಿಂದ ಬಿ.ಜಿ.ಕೆರೆಯ ಪ್ರಗತಿಪರ ರೈತ ವೀರಭದ್ರಪ್ಪ ಅವರ ವಸುಂಧರಾ ಕೃಷಿ ಕ್ಷೇತ್ರದಲ್ಲಿ ಇಳಿಸುತ್ತಿದ್ದ ನೀರಾಗೆ ಬೇಡಿಕೆ ತಗ್ಗಿದೆ.

ಲಾಕ್‌ಡೌನ್ ವೇಳೆ ಎರಡು ತಿಂಗಳ ಕಾಲ ಬಾರಿ ಬೇಡಿಕೆ ಕಾಯ್ದುಕೊಂಡಿದ್ದ ನೀರಾವನ್ನು ಈಗ ಕೇಳುವವರೇ ಇಲ್ಲವಾಗಿದೆ. ವೈನ್‌ಶಾಪ್ ತೆರೆಯುವ ಮುನ್ನ ಮದ್ಯ ಪ್ರಿಯರು ನೀರಾ ಅಂಗಡಿ ಎದುರು ಸರತಿ ಸಾಲಲ್ಲಿ ನಿಂತು ಕಲ್ಪರಸ ಪಡೆದುಕೊಳ್ಳುತ್ತಿದ್ದರು.

ಅಲ್ಲದೆ ಕೆಲವೇ ಗಂಟೆಗಳಲ್ಲಿ 40 ಲೀಟರ್‌ನಷ್ಟು ನೀರಾ ಮಾರಾಟವಾಗುತ್ತಿತ್ತು. ಈಗ ಇಲ್ಲಿಗೆ ಬರುವವರೇ ಇಲ್ಲವಾಗಿದೆ. ಕನಿಷ್ಠ ನೀರಾ ಇಳಿಸುವ ಕೃಷಿ ಕಾರ್ಮಿಕರಿಗೆ ಕೂಲಿ ಕೊಡುವಷ್ಟು ಸಹ ಆದಾಯ ಬರದಾಗಿದೆ ಎಂದು ವಸುಂಧರಾ ಕೃಷಿ ಕ್ಷೇತ್ರದ ಮಾಲಕಿ ಎಸ್.ವಿ.ಸುಮಂಗಲಮ್ಮ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net