ಮೊಳಕಾಲ್ಮೂರು ತೊರೆಯಲ್ಲ ಶ್ರೀರಾಮುಲು

B Sriramulu Ballari
Published on

ಕೊಂಡ್ಲಹಳ್ಳಿ: ಸಚಿವ ಶ್ರೀರಾಮುಲು ಮುಂದಿನ ಚುನಾವಣೆಯಲ್ಲಿ ಮೊಳಕಾಲ್ಮೂರು ಕ್ಷೇತ್ರದಲ್ಲಿ ಸ್ಪರ್ಧಿಸುವುದಿಲ್ಲ ಎಂಬುದು ಸುಳ್ಳು ಸುದ್ದಿ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಜಯಪಾಲಯ್ಯ ಹೇಳಿದರು.

ಬಿ.ಜಿ.ಕೆರೆಯ ವಸುಂಧರ ಕೃಷಿ ಕ್ಷೇತ್ರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಬಿಜೆಪಿ ಮಂಡಲಗಳ ಪದಾಧಿಕಾರಿಗಳ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜನ ಇದನ್ನು ನಂಬಬಾರದು. ಅವರನ್ನು ಮುಂದಿನ ಸಿಎಂ ಮಾಡುವ ಜವಾಬ್ದಾರಿ ನಮ್ಮದು ಎಂದು ತಿಳಿಸಿದರು.

ಮೊಳಕಾಲ್ಮೂರು ಕ್ಷೇತ್ರದ 59 ಕೆರೆಗಳಿಗೆ ನೀರುಣಿಸುವ 614 ಕೋಟಿ ರೂ. ವೆಚ್ಚದ ಪೈಪ್‌ಲೈನ್ ಕಾಮಗಾರಿಗೆ ಆ.3ರಂದು ಸಚಿವ ಶ್ರೀರಾಮುಲು ಚಾಲನೆ ನೀಡುವರು ಎಂದು ಹೇಳಿದರು. ಬಿಜೆಪಿ ಮಂಡಲ ಅಧ್ಯಕ್ಷ ಡಾ.ಪಿ.ಮಂಜುನಾಥ್, ಉಪಾಧ್ಯಕ್ಷ ಕೃಷ್ಣಪ್ಪ, ನಾಯಕನಹಟ್ಟಿ ಮಂಡಲ ಅಧ್ಯಕ್ಷ ಇ.ರಾಮರೆಡ್ಡಿ, ಸಚಿವರ ಆಪ್ತ ಸಹಾಯಕ ಪಾಪೇಶ್, ಜಿಲ್ಲಾ ಉಪಾಧ್ಯಕ್ಷ ಜಿಂಕಲು ಬಸವರಾಜು, ಬೋರಣ್ಣ, ಮಾಜಿ ಅಧ್ಯಕ್ಷರಾದ ಆರ್.ಜಿ.ಗಂಗಾಧರಪ್ಪ, ಎಂವೈಟಿ ಸ್ವಾಮಿ, ಮಾಜಿ ಕಾರ್ಯದರ್ಶಿ ಕೆ.ಟಿ.ಶ್ರೀರಾಮರೆಡ್ಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net