ದೇಗುಲಗಳ ಬಾಗಿಲು ಬಂದ್

K HALLI GRAHANA 21
Published on

ಕೊಂಡ್ಲಹಳ್ಳಿ: ಸೂರ್ಯಗ್ರಹಣದ ನಿಮಿತ್ತ ಭಾನುವಾರ ಕೊಂಡ್ಲಹಳ್ಳಿ ಸುತ್ತಲಿನ ಗ್ರಾಮಗಳ ದೇಗುಲಗಳಲ್ಲಿ ಪೂಜೆ ಪುನಸ್ಕಾರಗಳು ಮಧ್ಯಾಹ್ನದ ವರೆಗೆ ನಡೆಯಲಿಲ್ಲ.

ಗ್ರಾಮದ ಬಿಳಿನೀರು ಚಿಲುಮೆಯ ಗುರುತಿಪ್ಪೇರುದ್ರಸ್ವಾಮಿ ದೇಗುಲ ಸೇರಿ ಮೊಗಲಹಳ್ಳಿ, ಬಿಜಿ ಕೆರೆ, ಕೋನಸಾಗರ, ಗೌರಸಮುದ್ರ ದೇವಸ್ಥಾನಗಳೂ ಬಾಗಿಲು ಕೂಡ ಬಂದ್ ಮಾಡಿದ್ದವು. ಜನರು ಹೊರಗೆ ಬರುವುದು ವಿರಳವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net