ಪ್ರಾಮಾಣಿಕತೆ, ಶ್ರದ್ಧೆ ಮುಖ್ಯ

K HALLI SANGAMA 10 (2)
Published on

ಕೊಂಡ್ಲಹಳ್ಳಿ: ಪ್ರಾಮಾಣಿಕತೆ, ಶ್ರದ್ಧೆಯಿಂದ ಕೆಲಸ ನಿರ್ವಹಿಸುವುದು ಅವಶ್ಯ ಎಂದು ನಿವೃತ್ತ ಮುಖ್ಯಶಿಕ್ಷಕ ಬಿ.ಬೀರಪ್ಪ ಹೇಳಿದರು.

ಹಳೇ ವಿದ್ಯಾರ್ಥಿಗಳ ವತಿಯಿಂದ ಇಲ್ಲಿನ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಗುರುವಂದನ ಹಾಗೂ ಅಪೂರ್ವ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಂದೆ-ತಾಯಿ, ಗುರು-ಹಿರಿಯರನ್ನು ಗೌರವಿಸಿ ಉತ್ತಮ ನಡೆನುಡಿ ಪಾಲಿಸಬೇಕು. ಇತ್ತೀಚೆಗೆ ವೃದ್ಧಾಶ್ರಮಗಳು ಹೆಚ್ಚುತ್ತಿರುವುದು ಬೇಸರದ ಸಂಗತಿ ಎಂದರು.

ನಿವೃತ್ತ ಡಿವೈಎಸ್‌ಪಿ ಜಿ.ಗುರುಸ್ವಾಮಿ ಮಾತನಾಡಿ, ಕಾಲಗರ್ಭದಲ್ಲಿ ಯಾರೂ ಶಾಶ್ವತವಲ್ಲ.ಆದರೆ ನಾವು ಮಾಡುವ ಕೆಲಸ ಮಾತ್ರ ಶಾಶ್ವತ ಎಂದು ತಿಳಿಸಿದರು.

ನಿವೃತ್ತ ಶಿಕ್ಷಕ ಡಿ.ಎಲ್.ಶಂಭು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಹನೆ, ಸಂಸ್ಕೃತಿ ಅತಿ ಮುಖ್ಯ ಎಂದರು.

ನಿವೃತ್ತ ಶಿಕ್ಷಕ ಕೆ.ಎಸ್.ವಿಜಯ್‌ಕುಮಾರ್, ಶಾಲಾಡಳಿತ ಮಂಡಳಿಯ ಕಾರ್ಯದರ್ಶಿ ಟಿ.ರೇವಣ್ಣ ಮಾತನಾಡಿದರು.

ಎಚ್.ಗಂಗಣ್ಣ, ಕೆಪಿಎಚ್.ರಾಜನ್, ಶಾಲಾ ಸಮಿತಿ ನಿರ್ದೇಶಕರಾದ ಗುರುಸಿದ್ದಪ್ಪ, ಮಾರ್ಕಂಡೇಯಪ್ಪ, ಬೋಧಕೇತರ ಸಿಬ್ಬಂದಿ ಗುರುಮೂರ್ತಿ, ನಾಗರಾಜ್, ಎಲ್.ನಾಗರಾಜ್ ಅವರನ್ನು ಗೌರವಿಸಲಾಯಿತು. ಗ್ರಾಪಂ ಸದಸ್ಯ ಕೆ.ಸಿ.ಮಂಜುನಾಥ್, ಕೆ.ಟಿ.ರುದ್ರಪ್ಪ, ಪಿ.ಎನ್.ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net