ಮಗುವಿನ ಆರೋಗ್ಯದತ್ತ ಚಿತ್ತ ಇರಲಿ

K HALLI ABHIYANA 12 (1)
Published on

ಕೊಂಡ್ಲಹಳ್ಳಿ: ಗರ್ಭಿಣಿಯರು ತಮ್ಮೊಂದಿಗೆ ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಬಿ.ಶಿವಕುಮಾರ್ ತಿಳಿಸಿದರು.

ಆರೋಗ್ಯ ಇಲಾಖೆ ಹಾಗೂ ಐಸಿಡಿಎಸ್ ಸಹಯೋಗದಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೋಷಣ್ ಅಭಿಯಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ಪೋಷಣ್ ಅಭಿಯಾನದಡಿ ಆಯ್ದ ಅಂಗನವಾಡಿಗಳಲ್ಲಿ ಬಾಲಕಿಯರು, ಗರ್ಭಿಣಿಯರಿಗೆ ರಕ್ತಹೀನತೆಯ ತಪಾಸಣೆ, ಆರೋಗ್ಯಕರ ಮಗುವಿನ ಪ್ರದರ್ಶನ, ಶಾಲೆ ಬಿಟ್ಟ ಬಾಲಕಿಯರಿಗೆ ಪೋಷಕಾಂಶದ ಮಾಹಿತಿ, ಸ್ವಚ್ಛತಾ ದಿವಸ್ ಆಚರಣೆ, ಸೀಮಂತ, ಪುರುಷರಿಗಾಗಿ ಅಡುಗೆ ಸ್ಪರ್ಧೆ, ಅಂಗನವಾಡಿ ಮಕ್ಕಳಿಗೆ ಆರೋಗ್ಯ ತಪಾಸಣೆ ಕಾರ್ಯ ನಡೆಸಲಾಗುವುದು ಎಂದರು.

ಗ್ರಾಮ ಪಂಚಾಯಿತಿ ಸದಸ್ಯೆ ತಿಪ್ಪಮ್ಮ, ಎಸ್‌ಡಿಎ ಕವಿತಾ, ಆಸ್ಪತ್ರೆಯ ಸಿಬ್ಬಂದಿ ವೆಂಕಟೇಶ್ ನಾಯ್ಕ, ಆರೋಗ್ಯ ಸಹಾಯಕರಾದ ಮಾರುತಮ್ಮ, ಮಾಲಾಶ್ರೀ, ಶೋಭಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net