ಹನುಮಂತನಹಳ್ಳಿಯಲ್ಲಿ ಚಾಲನೆ

K HALLI HANUMANTANAHALLI(A).J.19 (2)
Published on

ಕೊಂಡ್ಲಹಳ್ಳಿ: ಪೋಲಿಯೋ ಲಸಿಕೆಯಿಂದ ಯಾವ ಮಗುವೂ ವಂಚಿತವಾಗದಂತೆ ಜಾಗ್ರತೆ ವಹಿಸಬೇಕು ಎಂದು ನಾಯಕನಹಟ್ಟಿ ಬಿಜೆಪಿ ಮಂಡಲ ಅಧ್ಯಕ್ಷ ಇ.ರಾಮರೆಡ್ಡಿ ತಿಳಿಸಿದರು.

ಹನುಮಂತನಹಳ್ಳಿಯ ಅಂಗನವಾಡಿ ಕೇಂದ್ರದಲ್ಲಿ ಭಾನುವಾರ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪಾಲಕರು ಸ್ವಯಂ ಪ್ರೇರಿತರಾಗಿ ಬೂತ್‌ಗಳಿಗೆ ಮಕ್ಕಳನ್ನು ಕರೆತಂದು ಲಸಿಕೆ ಹಾಕಿಸುವ ಮೂಲಕ ದೇಶವನ್ನು ಪೋಲಿಯೋ ಮುಕ್ತವಾಗಿಸಬೇಕು ಎಂದರು.

ಮುಖ್ಯಶಿಕ್ಷಕ ಕೆ.ಎಂ.ಕೇಶವಮೂರ್ತಿ, ಆಶಾ ಕಾರ್ಯಕರ್ತೆ ಪಿ.ಆರ್.ವೀಣಾ, ಅಂಗನವಾಡಿ ಕಾರ್ಯಕರ್ತೆಯರಾದ ಸುಮಿತ್ರಾ, ಕೆ.ಟಿ.ಭಾಗ್ಯಮ್ಮ, ಯಶೋದಮ್ಮ, ಚಂದ್ರಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net