ನಿಲ್ಲದ ವಾಹನ ಸಂಚಾರ

K HALLI ANDHRA 11
Published on

ಕೊಂಡ್ಲಹಳ್ಳಿ: ನೆರೆಯ ಆಂಧ್ರದ ಅನಂತಪುರ ಜಿಲ್ಲೆಯಲ್ಲಿ ಕರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಗಡಿಭಾಗದ ಜನರನ್ನು ನಿದ್ದೆಗೆಡಿಸುತ್ತಿದೆ.

ಮೊಳಕಾಲ್ಮೂರು ತಾಲೂಕಿನ ಗಡಿಯ ಸಂಪರ್ಕದ ರಸ್ತೆಗಳನ್ನು ಬಿಗಿಗೊಳಿಸಲಾಗಿದ್ದರೂ, ಆಂಧ್ರದ ವಾಹನ-ಜನ ಸಂಚಾರ ಬಂದ್ ಆಗಿಲ್ಲ ಎಂಬ ದೂರು ಕೇಳಿ ಬರುತ್ತಿವೆ.

ರಾಯದುರ್ಗ ತಾಲೂಕಿನ ಈಸಲು ಹೊಸಹಳ್ಳಿ, ಗಲ್‌ಗಲ್ ಗ್ರಾಮಗಳ ಮೂಲಕ ಸಮೀಪದ ಒಳಮಾರ್ಗದಿಂದ ಕೊಂಡ್ಲಹಳ್ಳಿಗೆ ವಾಹನ ಸಂಚಾರವಿದೆ. ಶನಿವಾರ ಕೂಡ ಆಂಧ್ರದ ಆಟೋ, ಟ್ರಾೃಕ್ಟರ್, ಬೈಕ್‌ಗಳ ಓಡಾಟ ಕಂಡುಬಂತು. ಗಡಿಭಾಗದಲ್ಲಿ ಹೆಚ್ಚಿನ ಭದ್ರತೆ ಕೈಗೊಳ್ಳಬೇಕು ಎಂದು ಗ್ರಾಮದ ನಾಗೇಶ್, ಉಮೇಶ್, ಮಧು ಇತರರು ಮನವಿ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net