ಮೊಗಲಹಳ್ಳಿಯಲ್ಲಿ ಶಿವರಾತ್ರಿ

K HALLI MOGALAHALLI 22 (2)
Published on

ಕೊಂಡ್ಲಹಳ್ಳಿ: ಸಮೀಪದ ಮೊಗಲಹಳ್ಳಿಯ ಶಿವಾಲಯದಲ್ಲಿ ಶುಕ್ರವಾರ ಮಹಾಶಿವರಾತ್ರಿ ಪೂಜೆ ನೆರವೇರಿದವು.

ದೇವಾಲಯಕ್ಕೆ ಸುಣ್ಣ, ಬಣ್ಣ ಬಳಿದು ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ದೇಗುಲದ ಆವರಣದಲ್ಲಿ ಶಿವನ ಮೂರ್ತಿ ಭಕ್ತರ ಗಮನ ಸೆಳೆಯಿತು.

ಚಂದ್ರಮೌಳೇಶ್ವರ ಎಂದೆ ಹೆಸರಾಗಿರುವ ಶಿವಲಿಂಗಕ್ಕೆ ರುದ್ರಾಭಿಷೇಕ, ಪತ್ರೆ-ಪುಷ್ಪಾರ್ಚನೆ ಮಾಡಲಾಯಿತು. ಶನಿವಾರ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ದೇವಸ್ಥಾನದ ಕನ್ವೀನರ್ ಎಂ.ಜಿ.ಬಸವರಾಜ್, ಎಂ.ಪಿ.ಈಶ್ವರಪ್ಪ, ಎವಿ ತಿಪ್ಪೇಸ್ವಾಮಿ, ಎಂ.ಜಿ.ಮಂಜುನಾಥ್, ತಿಪ್ಪೇಸ್ವಾಮಿ, ಕೆ.ಟಿ.ಕೇಶವರೆಡ್ಡಿ, ಆರ್.ಹನುಮಂತರೆಡ್ಡಿ, ಯೂನಿಯನ್ ಬ್ಯಾಂಕ್ ಜಿಲ್ಲಾಧ್ಯಕ್ಷ ಆರ್.ರಾಮರೆಡ್ಡಿ, ಎಂ.ಕೆ.ಓಂಕಾರಪ್ಪ, ಗ್ರಾಪಂ ಮಾಜಿ ಸದಸ್ಯ ಎಂ.ಬಿ.ತಿಪ್ಪೇಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net