ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಿಷಿದ್ಧ

K HALLI MASEEDI 18
Published on

ಕೊಂಡ್ಲಹಳ್ಳಿ: ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಗೆ ನಿರ್ಬಂಧ ಇರುವುದರಿಂದ ಯಾರೂ ಒಂದೆಡೆ ಜಮೆ ಆಗಬಾರದು ಎಂದು ಪಿಡಿಒ ಪ್ರಹ್ಲಾದ್‌ಕುಮಾರ್ ತಿಳಿಸಿದರು.

ಗ್ರಾಮದ ಸಂತೆ ಮೈದಾನ ಸಮೀಪದ ಮಸೀದಿಗೆ ಶನಿವಾರ ಭೇಟಿ ನೀಡಿ ಮುಸ್ಲಿಂ ಸಮುದಾಯದವರನ್ನುದ್ದೇಶಿಸಿ ಮಾತನಾಡಿದ ಅವರು, ಮಸೀದಿಯಲ್ಲಿ ಒಬ್ಬರಿಗೂ ಸಹ ಪ್ರಾರ್ಥನೆ ಮಾಡಲು ಅವಕಾಶವಿಲ್ಲ. ಎಲ್ಲರೂ ಪರಿಸ್ಥಿತಿ ಅರ್ಥಮಾಡಿಕೊಂಡು ಮನೆಯಲ್ಲೇ ಪ್ರಾರ್ಥನೆ ಮಾಡಿ ಕರೊನಾ ವೈರಸ್ ನಿಯಂತ್ರಣಕ್ಕೆ ಸಹಕಾರ ನೀಡಬೇಕು ಎಂದು ಕೋರಿದರು.

ಮಜೀದ್‌ಸಾಬ್, ವಕೀಲ ಎಚ್.ಸಿ. ಪ್ರದೀಪ್, ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಬಿ. ಶಿವಕುಮಾರ್, ಫಾರ್ಮಸಿಸ್ಟ್ ವೆಂಕಟೇಶ್‌ನಾಯ್ಕ, ಮಾಜಿ ಗ್ರಾಪಂ ಸದಸ್ಯ ಬಿ. ತಿಪ್ಪೇಸ್ವಾಮಿ, ಆಶಾ ಕಾರ್ಯಕರ್ತೆಯರಾದ ಯಶೋದಮ್ಮ, ಮಂಜುಳಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net