ಹೂಕೋಸು ನಾಶಪಡಿಸಿದ ರೈತರು

CTD KOSU 29
Published on

ಕೊಂಡ್ಲಹಳ್ಳಿ: ಲಾಕ್‌ಡೌನ್‌ನಿಂದ ಮಾರಾಟ ಮಾಡಲು ಸಾಧ್ಯವಾಗದೆ ಕಠಾವಿಗೆ ಬಂದಿದ್ದ ಹೂ ಕೋಸನ್ನು ಬಿ.ಜಿ.ಕೆರೆಯ ರೈತ ಸೋದರರು ನಾಶಪಡಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕು ಬಿ.ಜಿ.ಕೆರೆ ಗ್ರಾಮದ ಬಸವರಾಜ್, ಶಿವಮೂರ್ತಿ ಎಂಬುವವರು 3.5 ಎಕರೆ ನೀರಾವರಿ ಜಮೀನಿನಲ್ಲಿ ಹೂಕೋಸು ಬೆಳೆದಿದ್ದರು. ಫಸಲು ಕೊಯ್ಲಿಗೆ ಬಂದು ವಾರವೇ ಕಳೆದರೂ ಮಾರುಕಟ್ಟೆ, ಸಂತೆ ಇಲ್ಲದ ಕಾರಣ ಮಾರಾಟ ಸಾಧ್ಯವಾಗಿರಲಿಲ್ಲ.

ಇದರಿಂದ ಜಮೀನಿನಲ್ಲೇ ಉಳಿದ ಕೋಸು ಹಾಳಾಗುತ್ತಿದ್ದನ್ನು ಕಂಡು ಮನನೊಂದ ರೈತರು ಫಸಲನ್ನು ಟ್ರಾೃಕ್ಟರ್ ರೂಟ್ರವೇಟ್‌ನಿಂದ ನಾಶಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net