ಆಟಕ್ಕೂ ಸೈ, ಕೆಲಸಕ್ಕೂ ಜೈ

K HALLI MAKKALU 01
Published on

ಕೊಂಡ್ಲಹಳ್ಳಿ: ಲಾಕ್‌ಡೌನ್‌ನಿಂದ ಮಕ್ಕಳ ಸಂತಸ ಇಮ್ಮಡಿಕೊಂಡಿದೆ. ಸದಾ ಕಾಲ ಶಾಲೆ, ಓದು ಎಂಬ ದುಗುಡದಲ್ಲಿ ಮನೆಯಲ್ಲೇ ಕುಳಿತುಕೊಳ್ಳುತ್ತಿದ್ದ ಬಹುತೇಕ ಮಕ್ಕಳಿಗೆ ಲಾಕ್‌ಡೌನ್ ಸಂಭ್ರಮವನ್ನು ತಂದುಕೊಟ್ಟಿದೆ.

ಹಲವು ಮಕ್ಕಳು ತಮಗಿಷ್ಟ ಬಂದ ಆಟೋಟದಲ್ಲಿ ತೊಡಗಿದರೆ, ಇನ್ನು ಕೆಲ ಮಕ್ಕಳ ತಮ್ಮ ಪಾಲಕರ ವೃತ್ತಿಗೆ ಸಹಾಯ ಮಾಡುತ್ತಿರುವ ದೃಶ್ಯ ಕಾಣಸಿಗುತ್ತಿದೆ. ಹಣ್ಣು, ಸೊಪ್ಪು, ತರಕಾರಿ, ಕೋಳಿ ಮೊಟ್ಟೆ ಮಾರಾಟ, ಕೃಷಿ ಕಾಯಕ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತಮ್ಮನ್ನು ಬಿಸಿಯಾಗಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net