ಮನೆ ಅಂಗಳದಲ್ಲಿ ಆಟದಲ್ಲಿ ತಲ್ಲೀನ

K HALLI AATA..A.19
Published on

ಕೊಂಡ್ಲಹಳ್ಳಿ: ಲಾಕ್‌ಡೌನ್‌ನಿಂದ ಮನೆಯಲ್ಲಿರುವುದು ಅನಿವಾರ್ಯವಾದ್ದರಿಂದ ಬಹುತೇಕರು ಸಮಯ ಕಳೆಯಲು ಪರ್ಯಾಯ ವ್ಯವಸ್ಥೆ ಕಂಡುಕೊಂಡಿದ್ದಾರೆ.

ಮಹಿಳೆಯರು ಅಡುಗೆ ತಯಾರಿಯಲ್ಲಿ ತೊಡಗಿದರೆ ಹುಡುಗಿಯರು ಚೌಕಾಬಾರ, ಕೇರಂ, ಕವಡೆ, ಹಾವು ಏಣಿಯಾಟ, ಚೆಸ್‌ನಂತಹ ಒಳಾಂಗಣ ಕ್ರೀಡೆಯಲ್ಲಿ ಮಗ್ನರಾಗಿದ್ದಾರೆ. ಹುಡುಗರು ಚಿಣ್ಣಿ ದಾಂಡು, ಲಗೋರಿ, ಸೈಕಲ್ ರೌಂಡ್ಸ್‌ನಲ್ಲಿ ತೊಡಗಿದ್ದಾರೆ. ಇನ್ನು ಯಾವ ಕೆಲಸವೂ ಇಲ್ಲದ ಪುರುಷರು ಪೂಜೆ, ಮನೆಯ ಮಕ್ಕಳೊಂದಿಗೆ ಆಟೋಟದಲ್ಲಿ ಕಾಲ ದೂಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net