ಗೌರಸಮುದ್ರ ಮಾರಮ್ಮಗೆ ಪೂಜೆ

K HALLI DEVALAYA 08 (1)
Published on

ಕೊಂಡ್ಲಹಳ್ಳಿ: ಲಾಕ್‌ಡೌನ್‌ನಿಂದಾಗಿ ಬಂದ್ ಆಗಿದ್ದ ದೇಗುಲ, ಪ್ರಾರ್ಥನಾ ಮಂದಿರಗಳ ಬಾಗಿಲು ಸೋಮವಾರ ತೆರೆದವು.

ಸಮೀಪದ ಗೌರಸಮುದ್ರದ ಮಾರಮ್ಮ ದೇವಿ ಗುಡಿಯನ್ನು ಬೆಳಗ್ಗೆ ಸ್ವಚ್ಛಗೊಳಿಸಿ ತೆರೆಯಲಾಯಿತು. ಈ ಕಾರ್ಯದಲ್ಲಿ ಮುಜರಾಯಿ ಇಲಾಖೆ ಸಿಬ್ಬಂದಿ, ಗ್ರಾಮಸ್ಥರು ಭಾಗವಹಿಸಿದ್ದರು.

ಬಿ.ಜಿ.ಕೆರೆಯ ಬಸವೇಶ್ವರಸ್ವಾಮಿ ದೇಗುಲದಲ್ಲಿ ರುದ್ರಾಭಿಷೇಕದೊಂದಿಗೆ ಪೂಜೆಗಳು ಆರಂಭಗೊಂಡವು. ಮೊಗಲಹಳ್ಳಿಯ ಈಶ್ವರಸ್ವಾಮಿ, ಕೋನಸಾಗರದ ತಿಮ್ಮಪ್ಪಸ್ವಾಮಿ, ತಿಪ್ಪೇರುದ್ರಸ್ವಾಮಿ, ಕೊಂಡ್ಲಹಳ್ಳಿಯ ಸಾಲೇಶ್ವರ, ದುರ್ಗಾಂಬಿಕಾ ದೇಗುಲಗಳು ತೆರೆದು ಭಕ್ತರಿಗೆ ದರ್ಶನ ನೀಡಿದವು. ಭಕ್ತರ ಸಂಖ್ಯೆ ತೀರ ವಿರಳವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net