ನೇರ‌್ಲಹಳ್ಳೀಲಿ ಆರೋಗ್ಯ ಶಿಬಿರ

K HALLI SHIBIRA 13 (1)
Published on

ಕೊಂಡ್ಲಹಳ್ಳಿ: ಸಮೀಪದ ನೇರ‌್ಲಹಳ್ಳಿಯಲ್ಲಿ ಗುರುವಾರ ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಆರೋಗ್ಯ ತಪಾಸಣೆ ಉಚಿತ ಶಿಬಿರ ಏರ್ಪಡಿಸಲಾಗಿತ್ತು.

ಶಿಬಿರದಲ್ಲಿ ಸಕ್ಕರ ಕಾಯಿಲೆ, ರಕ್ತದ ಒತ್ತಡ, ಮಂಡಿ ನೋವು, ಅಸ್ತಮಾ, ಚರ್ಮ ರೋಗ, ಕಣ್ಣಿನ ಸಮಸ್ಯೆ, ಗ್ಯಾಸ್ಟ್ರಿಕ್ ಇತರೆ ತೊಂದರೆ ತಪಾಸಣೆ ಮಾಡಲಾಯಿತು.

ಗ್ರಾಪಂ ಪಿಡಿಒ ಕೌಸರ್, ಎಸ್‌ಡಿಎಂಸಿ ಅಧ್ಯಕ್ಷೆ ನಾಗವೇಣಿ, ಮುಖ್ಯಶಿಕ್ಷಕ ಕೆ.ಎಲ್.ರವೀಂದ್ರನಾಥ್, ವೆಡ್ಸ್ ಸಂಸ್ಥೆ ಕಾರ್ಯದರ್ಶಿ ಬಿ.ಗಂಗಾಧರ್, ನಿವೃತ್ತ ಪ್ರಾಂಶುಪಾಲ ಎಂ.ಕರಿಯಪ್ಪ, ವೈದ್ಯರಾದ ಡಾ.ಶಿವಲಿಂಗ ಬೆಂಡೆಕಾಯಿ, ನರಸಿಂಹ, ಸೂರ್ಯಕಾಂತ ಗೋರೆ, ಶ್ರೀನಿವಾಸ್ ಯಾದವ್, ಮಮತಾಶ್ರೀ, ರಾಘವೇಂದ್ರ, ವಿಷ್ಣುಪ್ರಿಯಾ, ಅಶ್ವಿನಿ, ದಿಶಾ ಶೇಖರ್, ಅಕ್ಷತಾ, ವರ್ಣಿತಾ, ಆರೋಗ್ಯ ಸಹಾಯಕ ಜಿ.ಟಿ. ಕುಮಾರ್ ಭಾಗವಹಿಸಿದ್ದರು.

ಆಯುಷ್ ಇಲಾಖೆ, ಬೆಂಗಳೂರಿನ ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಮೊಳಕಾಲ್ಮೂರಿನ ವೆಡ್ಸ್ ಸಂಸ್ಥೆಯಿಂದ ಶಿಬಿರ ಆಯೋಜಿಸಲಾಗಿತ್ತು. 420 ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net