

ಕೊಂಡ್ಲಹಳ್ಳಿ: ಗ್ರಾಮದಲ್ಲಿ ಕೋವಿಡ್-19 ಸಮೀಕ್ಷೆ ಕಾರ್ಯ ಆರಂಭಗೊಂಡಿದ್ದು, ಗುರುವಾರ ಪ್ರತಿ ಮನೆಗಳಿಗೆ ಭೇಟಿ ನೀಡಿದ ಶಿಕ್ಷಕರು, ಕುಟುಂಬದ ಸದಸ್ಯರಿಂದ ಆರೋಗ್ಯ ಮಾಹಿತಿ ಪಡೆದರು.
ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯ ತೊಂದರೆ, ಕ್ಯಾನ್ಸರ್, ಲಿವರ್ ಇನ್ನಿತರ ತೊಂದರೆಯುಳ್ಳವರ ಸಂಪೂರ್ಣ ವಿವರ ಹಾಗೂ ರೋಗಿಗಳ ಸಂಖ್ಯೆ ದಾಖಲಿಸಿಕೊಂಡರು.
ಗರ್ಭಿಣಿ, ಬಾಣಂತಿಯರಲ್ಲದೆ ಕುಟುಂಬದ ಪ್ರತಿ ಸದಸ್ಯರನ್ನು ವೈಯಕ್ತಿಕವಾಗಿ ಜ್ವರ, ಕೆಮ್ಮು, ಶೀತ, ಉಸಿರಾಟ ತೊಂದರೆ, ಕ್ಷಯ ರೋಗದ ಬಗ್ಗೆ ಪ್ರಶ್ನಿಸಿದರು.
ಬಿಎಲ್‌ಒ ಸಹಿತ 139 ಶಿಕ್ಷಕರ ತಂಡ ಮೂರು ದಿನಗಳಿಂದ ಕಾರ್ಯನಿರತವಾಗಿದೆ ಎಂದು ಕೋನಸಾಗರ ಕ್ಲಸ್ಟರ್ ಬಿಆರ್‌ಪಿ ಎಸ್.ಆರ್.ತಿಪ್ಪೇಸ್ವಾಮಿ ತಿಳಿಸಿದರು.
ಮಾಸ್ಕ್, ಸ್ಯಾನಿಟೈಸರ್ ವಿತರಿಸಿಲ್ಲ: ಕುಟುಂಬಗಳ ಆರೋಗ್ಯ ಸಮೀಕ್ಷಾ ಕಾರ್ಯನಿರ್ವಹಿಸುವ ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಿಸಿಲ್ಲ. ನಮ್ಮ ಆರೋಗ್ಯ ರಕ್ಷಣೆಗೆ ನಾಸಸವೂ ಜಾಗ್ರತೆ ವಹಿಸಿಕೊಳ್ಳುವ ಪರಿಸ್ಥಿತಿ ಇದೆ ಎಂದು ಹೆಸರು ಹೇಳಲಿಚ್ಚಿಸಿದ ಶಿಕ್ಷಕರು ಅಳಲು ತೋಡಿಕೊಂಡರು.
ಸರ್ಕಾರಿ ನೌಕರರ ಸಂಘ ತಾಲೂಕಾಧ್ಯಕ್ಷ ಡಿ.ಚಿದಾನಂದಪ್ಪ ಹೇಳಿಕೆ: ಕುಟುಂಬ ಸಮೀಕ್ಷಾ ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಸರ್‌ಗಳನ್ನು ತಾಲೂಕಾಡಳಿತದಿಂದ ಒದಗಿಸಲಾಗುತ್ತಿದೆ. ಈ ಬಗ್ಗೆ ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಗಿದೆ.
ತಕ್ಷಣವೇ ಮನೆ ಮನೆ ಸಮೀಕ್ಷೆ ಕಾರ್ಯದಲ್ಲಿ ತೊಡಗಿರುವ ಎಲ್ಲ ಸಿಬ್ಬಂದಿಗೂ ಅಗತ್ಯ ಮಾಸ್ಕ್, ಸ್ಯಾನಿಟೈಸರ್ ಪೂರೈಸಲಾಗುವುದು.
ತಹಸೀಲ್ದಾರ್ ಎಂ.ಬಸವರಾಜ್