

ಕೊಂಡ್ಲಹಳ್ಳಿ: ಹೋಬಳಿಯ ವಿವಿಧೆಡೆ ಬೆಳೆದಿದ್ದ ಕುಂಬಳಕಾಯಿ ಫಸಲು ಲಾಕ್‌ಡೌನ್ ಕಾರಣಕ್ಕೆ ತೋಟದಲ್ಲೇ ಉಳಿದಿದ್ದು, ರೈತರು ನಷ್ಟ ಅನುಭವಿಸುವಂತಾಗಿದೆ.
ಕೆ.ಟಿ.ಶಿವಕುಮಾರ್ ಸೇರಿ ವಿವಿಧ ಹಳ್ಳಿಗಳ ಹತ್ತಾರು ರೈತರು ಕುಂಬಳಕಾಯಿ ನಾಟಿ ಮಾಡಿದ್ದರು. ಕಟಾವಿಗೆ ಬಂದಿರುವ ಕಾಯಿಯನ್ನು ವ್ಯಾಪಾರಿಗಳು ಪ್ರತಿ ಕೆಜಿಗೆ 14 ರೂ. ದರ ನಿಗದಿಪಡಿಸಿ 4 ಟನ್ ಖರೀದಿಸಿದ್ದರು.
ಲಾಕ್‌ಡೌನ್ ಘೋಷಣೆ ನಂತರ ಕಾಯಿ ಗಿಡದಲ್ಲೇ ಉಳಿದಿದೆ. ಬೆಳೆ ಕಟಾವಾಗಿ ಮಾರಾಟವಾಗಿದ್ದರಿಂದ 220-230 ಟನ್‌ನಿಂದ 30-35 ಲಕ್ಷ ರೂ. ಸಿಗುತ್ತಿತ್ತು ಎನ್ನುತ್ತಾರೆ ರೈತರು.
ಸದ್ಯ ತೋಟದಲ್ಲಿನ ಕುಂಬಳಕಾಯಿ ಬೆಳೆಯ ಮೇಲ್ಭಾಗವನ್ನು ಭತ್ತದ ಹುಲ್ಲಿನಿಂದ ಮುಚ್ಚುವ ಮೂಲಕ ರಕ್ಷಣೆ ಮಾಡಲಾಗಿದೆ. ತರಕಾರಿ ಸಾಗಣೆ, ಮಾರಾಟಕ್ಕೆ ಅನುವು ಮಾಡಲಾಗಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಈಗ ರಾಜ್ಯದ ಫಸಲಿಗೆ ಬೇಡಿಕೆ ಕಡಿಮೆಯಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ರೈತ ಕೆ.ಟಿ.ಶಿವಕುಮಾರ್ ಹೇಳಿಕೆ: ಯುಗಾದಿ ಸೇರಿ ವಿವಿಧ ಹಬ್ಬಗಳ ಸಂದರ್ಭದಲ್ಲಿ ಕೆಜಿ ಕುಂಬಳಕಾಯಿ 80 ರಿಂದ 500 ರೂ. ಗೆ ಬೆಲೆ ಇತ್ತು. ಈಗ ಬೆಲೆ ಇಳಿಕೆಯಾಗಿದೆ. ಸರ್ಕಾರ ರೈತರ ನೆರವಿಗೆ ಬರಬೇಕು.
ಜಿಲ್ಲಾ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಜಿ.ಸವಿತಾ ಹೇಳಿಕೆ: ಕುಂಬಳ ಖರೀದಿಗೆ ಜಿಲ್ಲೆಯ ಕೆಲ ವರ್ತಕರು ಮುಂದೆ ಬಂದಿದ್ದು, ಅವರಿಗೆ ಅಂತಾರಾಜ್ಯ ಪಾಸ್ ಕೂಡಾ ನೀಡಲಾಗಿದೆ. ಇದೇ 21ರಿಂದ ಖರೀದಿ ನಡೆಸುವರು. ರೈತರು ಆತಂಕಪಡುವ ಅಗತ್ಯವಿಲ್ಲ.