ಕೊಂಡ್ಲಹಳ್ಳಿಯಲ್ಲಿ 23 ಗೈರು

K HALLI SSLC 25
Published on

ಕೊಂಡ್ಲಹಳ್ಳಿ: ಗ್ರಾಮಾಂತರ ಪ್ರೌಢಶಾಲೆಯಲ್ಲಿ 313 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದರು. 23 ಮಕ್ಕಳು ಗೈರಾಗಿದ್ದರು.

ಬೆಳಗ್ಗೆ 7 ರಿಂದಲೇ ಹಳ್ಳಿಗಳ ವಿದ್ಯಾರ್ಥಿಗಳಿಗೆ ಬಸ್ ಸೌಕರ್ಯ ಕಲ್ಪಿಸಲಾಗಿತ್ತು. ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಶಿವಕುಮಾರ್, ಆರೋಗ್ಯ ಸಹಾಯಕರು ಥರ್ಮಲ್ ಸ್ಕ್ರೀನಿಂಗ್ ನಡೆಸಿದರು.

ಆಂಧ್ರದ ಇಬ್ಬರು ವಿದ್ಯಾರ್ಥಿಗಳಿಗೆ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆಸಲಾಯಿತು. ಕೇಂದ್ರಕ್ಕೆ ಜಂಟಿ ನಿರ್ದೆಶಕ ಜಿ.ರುದ್ರಪ್ಪ, ಉಪ ನಿರ್ದೇಶಕ ತಿಪ್ಪೇಶಪ್ಪ, ಡಯೆಟ್‌ನ ಕೆ.ನಾಗರಾಜ್ ಭೇಟಿ ನೀಡಿ ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net