ಕೃಷಿ ಕಷ್ಟ-ನಷ್ಟ ಎಂಬ ಭಾವನೆ ಸಲ್ಲ

Kondlahalli, farmer couple, Honour,
Published on

ಕೊಂಡ್ಲಹಳ್ಳಿ: ಮಲೆನಾಡನ್ನೇ ನೆನಪಿಸುವಂತೆ ತೋಟ ಬೆಳೆಸಿರುವ ಬಿ.ಜಿ.ಕೆರೆ ಎಸ್.ವಿ.ಸುಮಂಗಲಮ್ಮ-ವೀರಭದ್ರಪ್ಪ ಅವರ ಕೃಷಿ ಕಾರ್ಯ ರೈತರಿಗೆ ಮಾದರಿ ಎಂದು ನೇತ್ರ ತಜ್ಞ ಡಾ.ಕೆ.ನಾಗರಾಜ್ ತಿಳಿಸಿದರು.

ಗ್ರಾಮದ ರುದ್ರಮ್ಮ ತಾಳ್ಕೇರಪ್ಪ ಪ್ಯಾರಾಮೆಡಿಕಲ್ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕೃಷಿಕ ದಂಪತಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ಕಷ್ಟ-ಕಷ್ಟ ಎಂದು ಕೃಷಿ ತ್ಯಜಿಸಿ ಹಳ್ಳಿ ಬಿಟ್ಟು ನಗರಕ್ಕೆ ಹೋಗುವವರು ಇವರ ಸಾಧನೆ ಅರಿತುಕೊಳ್ಳಬೇಕು ಎಂದರು.

ರೈತ ಟಿ.ಗೌರಣ್ಣ, ನಿವೃತ್ತ ತೋಟಗಾರಿಕೆ ಅಧಿಕಾರಿ ಟಿ.ಸಿದ್ದಲಿಂಗಪ್ಪ, ಮುಖಂಡ ಹೊನ್ನೂರು ಗೋವಿಂದಪ್ಪ, ಶಿಕ್ಷಕ ಟಿ.ಶರಣಪ್ಪ, ತಾಪಂ ಸದಸ್ಯ ಟಿ.ರೇವಣ್ಣ, ಗ್ರಾಪಂ ಮಾಜಿ ಸದಸ್ಯ ಈ.ನಾಗೇಂದ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net