ಚರಂಡಿ ತ್ಯಾಜ್ಯ ವಿಲೇವಾರಿಗೆ ಮನವಿ

K HALLI BG.KERE 24 (1)
Published on

ಕೊಂಡ್ಲಹಳ್ಳಿ: ಗ್ರಾಪಂ ಪಂಚಾಯಿತಿ ಕೇಂದ್ರ ಬಿ.ಜಿ.ಕೆರೆ ಅಸ್ವಚ್ಛತೆಯ ಆಗರವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಪಂಚಾಯಿತಿ ಸಮೀಪವೇ ಹಾದು ಹೋಗಿರುವ ದೊಡ್ಡ ಚರಂಡಿ ತ್ಯಾಜ್ಯದಿಂದ ತುಂಬಿದ್ದು, ದುರ್ನಾತ ಬೀರುತ್ತಿದೆ. ಇದರ ಮುಂದೆ ಇರುವ ಅಂಗನವಾಡಿ ಕೇಂದ್ರ, ಖಾಸಗಿ ಪ್ರಾಥಮಿಕ ಶಾಲೆ ಹಾಗೂ ರಂಗಮಂದಿರಕ್ಕೆ ಬರುವ ಸಾರ್ವಜನಿಕರು, ಮಕ್ಕಳು ನರಕಯಾತನೆ ಅನುಭವಿಸುವಂತಾಗಿದೆ. ಬೃಹತ್ ಚರಂಡಿ ಪಂಚಾಯಿತಿಗೆ ಕೆಲವೇ ಮೀಟರ್ ಅಂತರದಲ್ಲಿದ್ದರೂ ತ್ಯಾಜ್ಯ ವಿಲೇವಾರಿಗೆ ಕ್ರಮ ಕೈಗೊಂಡಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net