ಕರೊನಾ ವೈರಸ್ ವಿರುದ್ಧ ಸಮರ

HLK JANATHA 22 (1)
Published on

ಕೊಂಡ್ಲಹಳ್ಳಿ: ಕರೊನಾ ವೈರಸ್ ವಿರುದ್ಧದ ಜನತಾ ಕರ್ಫ್ಯೂಗೆ ಕೊಂಡ್ಲಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಉತ್ತಮ ಪ್ರತಿಕ್ರಿಯೆ ದೊರೆಯಿತು.

ಬೆಳಗ್ಗೆ ವಾಯು ವಿಹಾರಕ್ಕೆ ಒಂದಷ್ಟು ಪ್ರಮಾಣದಲ್ಲಿ ಕಾಣಿಸಿಕೊಂಡ ಜನರು ಮರಳಿ ಮನೆ ಸೇರಿದ ಬಳಿಕ ಸಂಜೆಯಾದರೂ ಎಲ್ಲೂ ಕಾಣಿಸಿಕೊಳ್ಳಲಿಲ್ಲ.

ಹೋಟೆಲ್, ದಿನಸಿ ಅಂಗಡಿ, ಹಾರ್ಡ್‌ವೇರ್ಸ್‌, ಗ್ಯಾರೇಜ್ ಸೇರಿ ಎಲ್ಲ ಅಂಗಡಿಗಳು ಬಂದ್ ಆಗಿದ್ದವು. ಗ್ರಾಮದ ಸರ್ಕಲ್‌ಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ವಾಹನ ಸಂಚಾರ ಸ್ಥಗಿತವಾಗಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲೂ ವಾಹನಗಳು ಕಾಣಿಸಲಿಲ್ಲ. ಮೆಡಿಕಲ್ ಶಾಪ್, ಸರ್ಕಾರಿ ಆಸ್ಪತ್ರೆಗಳು ಎಂದಿನಂತೆ ತೆರೆದಿದ್ದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net