

ಕೊಂಡ್ಲಹಳ್ಳಿ: ಕರೊನಾ ವೈರಾಣು ತಡೆ ಮುಂಜಾಗ್ರತೆ ನಿಮಿತ್ತ ಗ್ರಾಮದಲ್ಲಿ ಗ್ರಾಪಂ ಸಿಬ್ಬಂದಿ ಸ್ವಚ್ಛತೆ ಕಾರ್ಯ ಭಾನುವಾರ ನಡೆಸಿದರು. ಚರಂಡಿಗಳಲ್ಲಿ ತ್ಯಾಜ್ಯ ತೆಗೆದು, ಸ್ವಚ್ಚಗೊಳಿಸಿ ಬ್ಲೀಚಿಂಗ್ ಪೌಡರ್ ಸಿಂಪಡಿಸಿದರು.
ಬೆಂಗಳೂರು ಸೇರಿ ಅನ್ಯ ಊರುಗಳಿಂದ ಗ್ರಾಮಕ್ಕೆ ಬಂದವರ ಮನೆಗಳಿಗೆ ಆಶಾ ಕಾರ್ಯಕರ್ತೆಯರು ಭೇಟಿ ನೀಡಿ ಅವರ ವಿವರ ಪಡೆದು ಆರೋಗ್ಯ ಲಕ್ಷಣಗಳ ಕುರಿತು ಮಾಹಿತಿ ಪಡೆದರು.