ಕುರಿ, ಮೇಕೆ ದರ ದುಪ್ಪಟ್ಟು

SHEEP download
Published on

ಕೊಂಡ್ಲಹಳ್ಳಿ: ಕರೊನಾ ಲಾಕ್‌ಡೌನ್ ಕೆಲ ವ್ಯವಹಾರಕ್ಕೆ ಅಡಚಣೆ, ನಷ್ಟ ಉಂಟು ಮಾಡಿದ್ದರೆ, ಹಲವರಿಗೆ ಲಾಭ ಮಾಡಿಕೊಟ್ಟಿದೆ.

ಪ್ರಸ್ತುತ ಮಟನ್ ಮಾರಾಟಕ್ಕೆ ಚಾಲನೆ ಸಿಕ್ಕಿದ್ದರಿಂದ ಮೊಟ್ಟೆ, ಚಿಕನ್ ಪ್ರಿಯರೆಲ್ಲರೂ ಮಟನ್‌ನತ್ತ ಆಸಕ್ತಿ ವಹಿಸಿದ್ದಾರೆ. ಹೀಗಾಗಿ ಇದರ ಬೆಲೆ ಎರಡು ಪಟ್ಟು ಹೆಚ್ಚಾಗಿದೆ. 450 ರೂ.ಗೆ ಮಾರಾಟವಾಗುತ್ತಿದ್ದ 1 ಕೆ.ಜಿ. ಮಟನ್ ಈಗ 650ಕ್ಕೆ ತಲುಪಿದ್ದರಿಂದ ಬಡ ಜನತೆಗೆ ಬಹು ಹೊರೆಯಾಗಿ ಪರಿಣಮಿಸಿದೆ.

ಅಂತೆಯೇ ಕುರಿ, ಮೇಕೆ ಸಂತೆ ಸಹ ಬಂದ್ ಆಗಿದ್ದರಿಂದ ಇವುಗಳ ಬೆಲೆ ಸಹ ದುಪ್ಪಟ್ಟಾಗಿದೆ. ಏಳೆಂಟು ಸಾವಿರಕ್ಕೆ ಸಿಗುತ್ತಿದ್ದ 20 ಕೆಜಿಯ ಕುರಿ ಪ್ರಸ್ತುತ 12ರಿಂದ 15 ಸಾವಿರಕ್ಕೆ, ಐದಾರು ಸಾವಿರಕ್ಕೆ ದೊರೆಯುತ್ತಿದ್ದ ಮೇಕೆಗಳು ಈಗ 9-10 ಸಾವಿರಕ್ಕೆ ಮಾರಾಟವಾಗುತ್ತಿವೆ.

ಸಂತೆ ಇಲ್ಲದಿದ್ದರೂ ಚಿಂತೆ ಇಲ್ಲ. ವ್ಯಾಪಾರಿಗಳು ಸ್ಥಳಕ್ಕೆ ಬಂದು ಹೆಚ್ಚಿನ ದರಕ್ಕೆ ಖರೀದಿಸುತ್ತಿದ್ದರಿಂದ ನಮಗೆ ಒಳ್ಳೆ ಲಾಭವಾಗುತ್ತಿದೆ ಎನ್ನುತ್ತಾರೆ ಕುರಿ ವ್ಯಾಪಾರಿಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net