

ಕೊಂಡ್ಲಹಳ್ಳಿ: ಕರೊನಾ ತಡೆಗೆ ಸಾರ್ವಜನಿಕ ಸ್ಥಳ, ಕಚೇರಿಗಳಲ್ಲಿ ಜನರು ಪರಸ್ಪರ ಅಂತರ ಕಾಪಾಡುವುದು ಅತ್ಯಗತ್ಯ ಎಂದು ಗೌರಸಮುದ್ರ ಗ್ರಾಮ ಪಂಚಾಯಿತಿ ಪಿಡಿಒ ಹೊನ್ನೂರಪ್ಪ ತಿಳಿಸಿದರು.
ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ವಿಶೇಷ ಸಭೆಯಲ್ಲಿ ಮಾತನಾಡಿ, ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದರು.
ಗ್ರಾಪಂ ಅಧ್ಯಕ್ಷೆ ಶಕುಂತಲಮ್ಮ ಅಧ್ಯಕ್ಷತೆ ವಹಿಸಿದ್ದರು. ಸದಸ್ಯ ಎಂ.ಓಬಣ್ಣ, ಮುಖಂಡ ಅಶ್ವತ್ಥ ಇತರರಿದ್ದರು.