ಕೊಂಡ್ಲಹಳ್ಳಿ: ಬ್ಯಾಂಕುಗಳಲ್ಲಿ ನಗದು ದೊರಕದೆ ಗ್ರಾಹಕರು ಪರದಾಡಬೇಕಾಯಿತು. ವಿವಿಧ ಬ್ಯಾಂಕ್‌ನಲ್ಲಿ ಸರತಿ ಸಾಲಿನ ಮೂಲಕ ಪ್ರವೇಶಾವಕಾಶ ನೀಡಲಾಯಿತು.
ಬ್ಯಾಂಕ್ ಸೇವಾವಧಿ ಬೆಳಗ್ಗೆ 10ರಿಂದ ಮಧ್ಯಾಹ್ನ 2ರ ವರೆಗೆ ಮಾತ್ರ ದೊರೆಯುತ್ತಿದೆ. ಇದರಿಂದ ಹಣ ಮತ್ತಿತರ ಬ್ಯಾಂಕಿಂಗ್ ಸೇವೆ ಪಡೆಯಲು ವ್ಯತ್ಯಯವಾಗುತ್ತಿದೆ ಎಂಬುದು ಗ್ರಾಹಕರ ಅಳಲಾಗಿತ್ತು.