

ಕೊಂಡ್ಲಹಳ್ಳಿ: ಕೊಂಡ್ಲಹಳ್ಳಿ ಸುತ್ತಮುತ್ತಲಿನ ಗ್ರಾಮಗಳ ರೈತರು ಮಾಗಿ ಉಳುಮೆ ಜತೆಗೆ ಜಮೀನುಗಳಿಗೆ ಕೊಟ್ಟಿಗೆ ಗೊಬ್ಬರ ಹೇರುವ ಕಾರ್ಯದಲ್ಲಿ ಬಿಸಿಯಾಗಿದ್ದಾರೆ.
ಈಗಾಗಲೇ ಗೊಬ್ಬರವನ್ನು ಜಮೀನಿನಲ್ಲಿ ಹರಡಿರುವ ರೈತರು ಮಾಗಿ ಉಳುಮೆಯಲ್ಲಿ ತೊಡಗಿದ್ದರೆ, ಗೊಬ್ಬರ ಹೇರದವರು ಈಗ ಬಾಡಿಗೆ ಟ್ರಾೃಕ್ಟರ್, ಬಂಡಿಗಳಲ್ಲಿ ಕೊಟ್ಟಿಗೆ ಗೊಬ್ಬರ ಹೇರಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಈ ಎಲ್ಲ ಕಾರ್ಯ ಪೂರ್ಣಗೊಂಡು ಉತ್ತಮ ಮಳೆ ಬಿದ್ದರೆ ಮುಂಗಾರು ಬಿತ್ತನೆಗೆ ಅನುಕೂಲವಾಗುತ್ತದೆ ಎನ್ನುತ್ತಾರೆ ಹನುಮಂತನಹಳ್ಳಿ ರೈತ ಈರಣ್ಣ.
ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಅಶೋಕ್ ಹೇಳಿಕೆ: ಮಾಗಿ ಬೇಸಾಯದಿಂದ ಮುಂಗಾರು ಹಂಗಾಮಿಗೆ ಬರುವ ಕೀಟಗಳ ಹತೋಟಿ ಸಾಧ್ಯವಾಗುತ್ತದೆ. ಕಳೆ ಕಡಿಮೆ ಆಗುವ ಜತೆಗೆ ಭೂಮಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ನೀರು ಹಿಡಿದಿಟ್ಟುಕೊಳ್ಳಲು ನೆರವಾಗುತ್ತದೆ. ಹೀಗಾಗಿ ಮಾಗಿ ಉಳುಮೆ ಅಗತ್ಯವಾಗಿ ಮಾಡಬೇಕು.