ಕೃಷಿ ಉತ್ಪನ್ನಗಳ ಸಾಗಣೆ ಚುರುಕು

K HALLI SAGANIKE 20
Published on

ಕೊಂಡ್ಲಹಳ್ಳಿ: ಕೃಷಿ ಉತ್ಪನ್ನಗಳ ಸಾಗಣೆಗೆ ಸರ್ಕಾರ ಅನುಮತಿ ನೀಡಿದ್ದರಿಂದ ರಾಜ್ಯ ಹಾಗೂ ಹೊರ ರಾಜ್ಯಗಳಿಗೆ ಬೀಜ, ರಸಗೊಬ್ಬರ ಇತ್ಯಾದಿ ಉತ್ಪನ್ನಗಳ ಸಾಗಣೆ ಕಾರ್ಯ ಬಲು ಜೋರಾಗಿ ಸಾಗಿದೆ.

ಕರೊನಾ ವೈರಸ್ ನಿಯಂತ್ರಣ ಉದ್ದೇಶದಿಂದ ಸರಕು ಸಾಗಣೆಗೆ ತಡೆ ಹಾಕಿದ್ದರಿಂದ ಮಹಾರಾಷ್ಟ್ರ, ಚೆನ್ನೈ ಇತರ ಪ್ರದೇಶಗಳಿಗೆ ಪೂರೈಕೆಯಾಗುತ್ತಿದ್ದ ಶೇಂಗಾ ಬೀಜ ಇತರ ಉತ್ಪನ್ನಗಳ ಸರಬರಾಜು ಸ್ಥಗಿತಗೊಂಡಿತ್ತು.

ಇದೀಗ ಮತ್ತೆ ಚಾಲನೆ ಸಿಕ್ಕಿದ್ದರಿಂದ ಬಿತ್ತನೆ ಬೀಜವನ್ನು ಮಿಲ್ ಮಾಲೀಕರು ಹಾಗೂ ರೈತರು ಲಾರಿಗಳಿಗೆ ಲೋಡ್ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net