ಫೆ.೨೩ ರಿಂದ ಕೊಂಡಂಗೇರಿ ಕ್ರಿಕೆಟ್ ಪ್ರೀಮಿಯರ್ ಲೀಗ್

logo
Published on

ಮಡಿಕೇರಿ: ರಾಫೆಲ್ಸ್ ಇಂಟರ್‌ನ್ಯಾಶನಲ್ ಪಿಯು ಕಾಲೇಜು ಹಾಗೂ ಸ್ಕೂಲ್ ಇವರ ಆಶ್ರಯದಲ್ಲಿ ಕೊಂಡಂಗೇರಿಯ ಶಾಲಾ ೧೪ನೇ ವರ್ಷದ ಕೊಂಡಂಗೇರಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿ ಫೆ.೨೩ ರಿಂದ ೨೬ ವರೆಗೆ ನಡೆಯಲಿದೆ ಎಂದು ಆಯೋಜಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಕಳೆದ ೧೩ ವರ್ಷಗಳಿಂದ ಕೊಂಡಂಗೇರಿ ಗ್ರಾಮಸ್ಥರನ್ನು ಒಂದುಗೂಡಿಸುವ ಸಲುವಾಗಿ ಕೊಂಡಂಗೇರಿಯಲ್ಲಿ ಗ್ರಾಮಸ್ಥರಿಗೆ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜನೆ ಮಾಡುತ್ತಾ ಬಂದಿದ್ದೇವೆ. ೧೪ನೇ ಬಾರಿಯ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲೆಯ ಯುವ ಸಾಧಕರಿಗೆ ಸನ್ಮಾನ, ಡ್ರಗ್ಸ್ ಮುಕ್ತ ಕೊಡಗು ಹಾಗೂ ಸ್ವಚ್ಛತಾ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದೆ ಎಂದು ಆಯೋಜಕರಾದ ಆಶಿಫ್ ತಿಳಿಸಿದ್ದಾರೆ.


ಹೆಚ್ಚಿನ ಮಾಹಿತಿಗಾಗಿ ೮೪೩೧೩೬೫೫೨೮, ೯೪೮೨೯೪೫೯೫೨ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net