ಮುಳ್ಳೂರಿನಲ್ಲಿ ಶ್ರೀ ಸಿದ್ದಪ್ಪಾಜಿ ಕೊಂಡೋತ್ಸವ

30-kollegal-1,,,,, KONDA
Published on

ಕೊಳ್ಳೇಗಾಲ : ತಾಲೂಕಿನ ಮುಳ್ಳೂರು ಗ್ರಾಮದ ಪರಿಶಿಷ್ಟ ಜನಾಂಗದ ಬಡಾವಣೆಯಲ್ಲಿ ಶ್ರೀ ಸಿದ್ದಪ್ಪಾಜಿ ಕೊಂಡೋತ್ಸವ ಸೋಮವಾರ ವಿಜೃಂಭಣೆಯಿಂದ ನೆರವೇರಿತು.ಭಾನುವಾರ ಸಂಜೆ ಮುಳ್ಳೂರು ಗ್ರಾಮದ ಹೆಬ್ಬಾಲಿಗೆ ಆಗಮಿಸಿದ ಕುರುಬನಕಟ್ಟೆಯ ಸಿದ್ದಪ್ಪಾಜಿ ಕಂಡಾಯಗಳನ್ನು ಗ್ರಾಮದ ಯಜಮಾನರು ಹಾಗೂ ಮುಖಂಡರು ಶ್ರದ್ಧಾ -ಭಕ್ತಿಯಿಂದ ಬರಮಾಡಿಕೊಂಡರು. ಮೆರವಣಿಗೆ ಮೂಲಕ ಕಂಡಾಯಗಳನ್ನು ತಂದು ಗ್ರಾಮದ ಅಂಬೇಡ್ಕರ್ ಸಮುದಾಯದ ಭವನದ ಮುಂಭಾಗ ನಿರ್ಮಿಸಿದ್ದ ಚಪ್ಪರ ದೊಳಗೆ ಇರಿಸಲಾಗಿತ್ತು.ರಾತ್ರಿ 9ಕ್ಕೆ ಕಂಡಾಯಗಳ ಸಮ್ಮು ಖದಲ್ಲಿ ನೀಲಗಾರರ ಸಾಂಪ್ರದಾಯದಂತೆ ಕೊಂಡಕ್ಕೆ ಅಗ್ನಿ ಸ್ಪರ್ಶ ಮಾಡಲಾಯಿತು.ಸೋಮವಾರ ಬೆಳಗಿನ ಜಾವ 4 ಕ್ಕೆ ಕಂಡಾಯಗಳನ್ನು ಅಲಂಕರಿಸಿ ಪೂಜೆ ಸಲ್ಲಿಸಲಾಯಿತು.

ನಂತರ ಮೆರವಣಿಗೆ ಮೂಲಕ ಗ್ರಾಮ ದೊಳಗೆ ಕಂಡಾಯಗಳನ್ನು ಹೊತ್ತು ತಂದ ನೀಲಗಾರರು ಕೊಂಡವನ್ನು 3 ಬಾರಿ ಪ್ರದಕ್ಷಿಣೆ ಹಾಕಿದರು. ಸಾವಿರಾರು ಜನರ ಹರ್ಷೋದ್ಗಾರ ನಡುವೆ ನೀಲಗಾರರು ಕೊಂಡ ಹಾಯ್ದರು. ಯಜಮಾನರಾದ ಬಸವಣ್ಣ, ನಿಂಗಯ್ಯ, ವಿಷಕಂಠ ಮೂರ್ತಿ ಪುಟ್ಟಮಾದ, ರಂಗಸ್ವಾಮಿ ಮತ್ತಿತರಿದ್ದರು. ಕೊಂಡೋತ್ಸವ ಹಿನ್ನೆಲೆಯಲ್ಲಿ ಗ್ರಾಮದ ಬೀದಿಗಳಿಗೆ ದೀಪಾಲಂಕಾರ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net