ಕೊಂಡಕ್ಕೆ ಬಿದ್ದು ಪೂಜಾರಿಗೆ ಗಾಯ

22 NMG 04
Published on

ನಾಗಮಂಗಲ: ತಾಲೂಕಿನ ದೊಡ್ಡಬಾಲ ಗ್ರಾಮದಲ್ಲಿ ಶ್ರೀ ಹುಚ್ಚಪ್ಪಸ್ವಾಮಿಯ ( 39 ವರ್ಷಗಳ ನಂತರ ಹಮ್ಮಿಕೊಂಡಿದ್ದ 14 ಕೂಟದ ದೇವರುಗಳ ಜಾತ್ರಾ ಮಹೋತ್ಸವ) ಕೊಂಡೋತ್ಸವದಲ್ಲಿ ಪೂಜಾರಿಯೊಬ್ಬರು ಕೊಂಡದೊಳಕ್ಕೆ ಬಿದ್ದು ಗಾಯಗೊಂಡಿರುವ ಘಟನೆ ನಡೆದಿದೆ.ಅರಕೆರೆ ಗ್ರಾಮದ ಪೂಜಾರಿ ಶಿವರಾಮ್ ಗಾಯಗೊಂಡವರು.

ಮಂಗಳವಾರ ಇವರು ಸಂಪ್ರದಾಯದಂತೆ ದೇವರನ್ನು ಹೊತ್ತು ಕೊಂಡದಲ್ಲಿ ಸಾಗುತ್ತಿದ್ದರು. ಆಯತಪ್ಪಿ ಕೊಂಡದೊಳಕ್ಕೆ ಬಿದ್ದು ಎರಡು ಕಾಲುಗಳಿಗೆ ಬೆಂಕಿ ತಗುಲಿದೆ. ಆಂಬುಲೆನ್ಸ್ ಮೂಲಕ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net