ಕೋಮುಲ್​ ಗೆಲುವು ಮುಂದಿನ ಚುನಾವಣೆಗೆ ನಾಂದಿ

25 MBL 5
Published on

ಮುಳಬಾಗಿಲು: ಕೋಲಾರ ಜಿಲ್ಲೆಯ ಎಲ್ಲ ಕಣ್ಣುಗಳು ಮುಳಬಾಗಿಲಿನ ಮೇಲೆ ಬಿದ್ದಿದ್ದವು. ಈ ಕೋಮುಲ್​ ಚುನಾವಣೆ ಜಿದ್ದಾಜಿದ್ದಿಯಿಂದ ನಡೆದಿದೆ. ಹಾಗಾಗಿ ಇಲ್ಲಿ ನಮಗೆ ಸಿಕ್ಕಜಯ ಮುಂದಿನ ಎಲ್ಲ ವಿಜಯಕ್ಕೂ ನಾಂದಿ ಆಗಲಿದೆ ಎಂದು ಶಾಸಕ ಸಮೃದ್ಧಿ ವಿ.ಮಂಜುನಾಥ ಹೇಳಿದರು.

ನಗರದಲ್ಲಿ ಅಂಬೇಡ್ಕರ್​ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಕೋಮುಲ್​ ಚುನಾವಣೆಯಲ್ಲಿ ಪೂರ್ವ ಮತ್ತು ಪಶ್ಚಿಮ ೇತ್ರಗಳ ಎರಡು ಅಭ್ಯರ್ಥಿಗಳ ಗೆಲುವಿನ ಸಂಭ್ರಮಾಚರಣೆ ವೇಳೆ ಮಾತನಾಡಿದರು. ಐದು ವರ್ಷಗಳ ಹಿಂದೆ ಕಾಡೇನಹಳ್ಳಿ ನಾಗರಾಜ್​ ಅವರು ಕೋಮುಲ್​ ನಿರ್ದೇಶಕರಾಗುವ ಮೂಲಕ ಜೆಡಿಎಸ್​ಗೆ ಬಲ ತಂದಿದ್ದಾರೆ. ಅದೇ ರೀತಿ ನಾನು ವಿಧಾನಸಭಾ ೇತ್ರದಲ್ಲಿ ಗೆಲುವು ಪಡೆದರೆ, ಇದೀಗ ಡಿಸಿಸಿ ಬ್ಯಾಂಕ್​ ಮತ್ತು ಕೋಮುಲ್​ ಗೆಲುವಿನಿಂದ ಪಕ್ಕೆ ಮತ್ತಷ್ಟು ಬಲ ಬಂದಿದೆ ಎಂದರು.

ಕಾರ್ಯಕರ್ತರ ಐಕ್ಯತೆ ಹಾಗೂ ಪಕ್ಷದ ಗೆಲುವಿಗೆ ಶ್ರಮವೇ ಇಂದಿನ ಲಿತಾಂಶಕ್ಕೆ ಕಾರಣವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಪೂರ್ವ ದಿಕ್ಕಿನಲ್ಲಿ ತ್ರಿಕೋನ ಸ್ಪರ್ಧೆ ನಡೆದಿದ್ದು, ಜೆಡಿಎಸ್​ಗೆ 35 ಮತಗಳು ಬರುವ ಮೂಲಕ ಕಾಡೇನಹಳ್ಳಿ ನಾಗರಾಜ್​ ಅವರು ಗೆಲುವು ಸಾಧಿಸಿದ್ದಾರೆ. ಅಲ್ಲದೆ, ನಮಗೆ ಬರಬೇಕಾಗಿದ್ದ 15 ಮತಗಳು ಹೈಜಾಕ್​ ಆಗಿವೆ. ಮುಂದಿನ ದಿನಗಳಲ್ಲಿ ಸರ್ವತೋಮುಖ ಅಭಿವೃದ್ಧಿಗೆ ಎಲ್ಲರೂ ಕೈ ಜೋಡಿಸಬೇಕೆಂದು ಮನವಿ ಮಾಡಿದರು.

ಕೋಮುಲ್​ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್​, ಬಿ.ವಿ.ಸಾಮೇಗೌಡ, ಡಿಸಿಸಿ ಬ್ಯಾಂಕ್​ ನಿರ್ದೇಶಕ ರುಪತಿ ರೆಡ್ಡಿ, ಮುಖಂಡರಾದ ಎಂ.ಆರ್​.ಮುರಳಿ, ಗೊಲ್ಲಹಳ್ಳಿ ಜಗದೀಶ್​, ಶ್ರೀನಿವಾಸ ರೆಡ್ಡಿ, ಸಿದ್ದಟ್ಟ ರಮೇಶ್​ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net